Author name: newskarkala desk

ಕಾರ್ಕಳದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ – ನಾಲ್ವರಿಗೆ ಗಾಯ

ಕಾರ್ಕಳ : ನಗರದ ಪುಲ್ಕೇರಿ ಬಳಿ ಬೈಕ್‌ಗಳೆರಡರ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಾ. 29ರಂದು ರಾತ್ರಿ ಸಂಭವಿಸಿದೆ. ಗಾಯಾಳನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡಿರುವ ಬೆಳ್ತಂಗಡಿ ಮೂಲದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡಿರುವ ಮುಡಾರಿನ ಆಶೀಸ್‌ ಹಾಗೂ ಕಡಾರಿಯ ಸ್ವಸ್ತಿಕ್‌ ಅವರನ್ನು ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ – ನಾಲ್ವರಿಗೆ ಗಾಯ Read More »

ಕಾಲು ಜಾರಿ ಬಾವಿಗೆ ಬಿದ್ದು ಯುವಕ ಸಾವು

ಕಾರ್ಕಳ : ಕಾಲು ಜಾರಿ ಬಾವಿಗೆ ಬಿದ್ದು ಕುಕ್ಕುಂದೂರು ಗ್ರಾಮದ ಸದಾನಂದ ಪೂಜಾರಿ (40) ಸಾವಿಗೀಡಾದ ಘಟನೆ ಮಾ. 16ರಂದು ಸಂಭವಿಸಿದೆ. ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸದಾನಂದ ಅವರ ಮೃತದೇಹ ಶನಿವಾರ ಬೆಳಿಗ್ಗೆ ಮನೆ ಎದುರಿನ ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ನಿದ್ದೆಯಿಂದ ಎದ್ದು ಮನೆ ಹೊರಗಡೆ ಬಂದ ಸದಾನಂದರು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಬೆಂಗಳೂರಿನಲ್ಲಿ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ ಸಿಬ್ಬಂದಿಯಾಗಿದ್ದ ಸದಾನಂದ ಅವರು ವಿವಿಧ ಸಂಘ – ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದುಕೊಂಡು ಹತ್ತಾರು ಸಮಾಜಮುಖಿ

ಕಾಲು ಜಾರಿ ಬಾವಿಗೆ ಬಿದ್ದು ಯುವಕ ಸಾವು Read More »

ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ಉದಯ ಕುಮಾರ್ ಹೆಗ್ಡೆ- ಕಾರ್ಯದರ್ಶಿಯಾಗಿ ಶಂಕರ್‌ ಹೆಗ್ಡೆ

ಮೂಡಬಿದಿರೆ : ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಧಾರ್ಮಿಕ ಮುಂದಾಳು, ಯರ್ಲಪಾಡಿಯ ಉದಯ ಕುಮಾರ್ ಹೆಗ್ಡೆ, ಕಾರ್ಯದರ್ಶಿಯಾಗಿ ಅಜೆಕಾರು ಶಂಕರ್ ಹೆಗ್ಡೆ ಅವರು ಆಯ್ಕೆಯಾಗಿರುತ್ತಾರೆ. ಮಾ. 8ರಂದು ಮೂಡಬಿದಿರೆಯಲ್ಲಿ ನಡೆದ ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಮೊಕ್ತೇಸರರಾಗಿ ಅನಿಲ್ ಹೆಗ್ಡೆ, ವೈ.ವಿ. ವಿಶ್ವನಾಥ ಹೆಗ್ಡೆ, ಪ್ರವೀಣ್ ಕುಮಾರ್ ಹೆಗ್ಡೆ, ಸಂದೀಪ್ ಹೆಗ್ಡೆ ಮತ್ತು ಕರುಣಾಕರ ಹೆಗ್ಡೆ ಆಯ್ಕೆಯಾಗಿರುತ್ತಾರೆ. ಕೇಶವ ಹೆಗ್ಡೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ಉದಯ ಕುಮಾರ್ ಹೆಗ್ಡೆ- ಕಾರ್ಯದರ್ಶಿಯಾಗಿ ಶಂಕರ್‌ ಹೆಗ್ಡೆ Read More »

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ತಾಲೂಕು ಅಧ್ಯಕ್ಷರಾಗಿ ಪ್ರಸಾದ್ ಐಸಿರ

ಪ್ರಧಾನ ಕಾರ್ಯದರ್ಶಿಗಳಾಗಿ ರಮೇಶ್ ಶಿವಪುರ – ದಿವಾಕರ ಬಂಗೇರ ಕಾರ್ಕಳ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಮಂಡಲದ ಅಧ್ಯಕ್ಷರಾಗಿ ಕುಕ್ಕುಂದೂರು ಗ್ರಾಮದ ಪ್ರಸಾದ್ ಐಸಿರ, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಪುರ ಗ್ರಾಮದ ರಮೇಶ್ ಕುಮಾರ್ ಹಾಗೂ ನಿಟ್ಟೆ ಗ್ರಾಮದ ದಿವಾಕರ್ ಬಂಗೇರ ಆಯ್ಕೆಯಾಗಿದ್ದಾರೆ.ಪ್ರಸಾದ್ ಅವರು ಎರಡು ಅವಧಿಗೆ ಕುಕ್ಕುಂದೂರು ಗ್ರಾ. ಪಂ. ಸದಸ್ಯರಾಗಿ, ಗ್ರಾಮ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರಮೇಶ್ ಕುಮಾರ್ ಅವರು ಈ ಹಿಂದೆ ಹೆಬ್ರಿ ತಾ.ಪಂ. ಅಧ್ಯಕ್ಷರಾಗಿ, ಕಾರ್ಕಳ ತಾ. ಪಂ. ಸಾಮಾಜಿಕ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ತಾಲೂಕು ಅಧ್ಯಕ್ಷರಾಗಿ ಪ್ರಸಾದ್ ಐಸಿರ Read More »

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳ ಆಯ್ಕೆ

ಪ್ರಧಾನ ಕಾರ್ಯದರ್ಶಿಯಾಗಿ ವರಂಗದ ಸುರೇಂದ್ರ ಕುಲಾಲ್‌ – ಕಾರ್ಯದರ್ಶಿಯಾಗಿ ಸುಮಿತ್‌ ನಲ್ಲೂರು ಉಡುಪಿ : ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಹೆಬ್ರಿ ತಾಲೂಕು ವರಂಗದ ಸುರೇಂದ್ರ ಕುಲಾಲ್‌ ಹಾಗೂ ಕಾರ್ಕಳ ತಾಲೂಕು ನಲ್ಲೂರು ಗ್ರಾ.ಪಂ. ಸದಸ್ಯ ಸುಮಿತ್‌ ನಲ್ಲೂರು ಸ್ಥಾನ ಪಡೆದಿದ್ದಾರೆ. ಸುರೇಂದ್ರ ಕುಲಾಲ್‌ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸುಮಿತ್‌ ನಲ್ಲೂರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಅವರು ನೂತನ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದ್ದು, ಅಧ್ಯಕ್ಷರಾಗಿ

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳ ಆಯ್ಕೆ Read More »

ಮಾ. 23-31 : ಸಾಣೂರು ಮುದ್ದಣನಗರ ಬ್ರಹ್ಮಬೈದರ್ಕಳ ಗರಡಿ ಬ್ರಹ್ಮಕಲಶಾಭಿಷೇಕ – ವಾರ್ಷಿಕ ನೇಮೋತ್ಸವ

ಕಾರ್ಕಳ : ಸಾಣೂರು ಗ್ರಾಮ ಮುದ್ದಣನಗರ ನಡ್ಯೋಡಿಬೆಟ್ಟ ಶ್ರೀಕ್ಷೇತ್ರ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಬ್ರಹ್ಮಬೈದರ್ಕಳ ಗರಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಧರ್ಮರಸು ಉಲ್ಲಾಯನ ಮಾಡ ಹಾಗೂ ಜೀರ್ಣೋದ್ಧಾರಗೊಂಡ ಗರ್ಭಗುಡಿಗಳಲ್ಲಿ ಶ್ರೀ ಕ್ಷೇತ್ರದ ಧರ್ಮದೈವಗಳ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವ ಮಾ. 23ರಿಂದ 31ರವರೆಗೆ ಜರುಗಲಿದೆ. ಮಾ. 14ರ ಸಂಜೆ ಗರಡಿಯ ಆವರಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ವೇಳೆ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶ್ರೀರಾಂ ಭಟ್‌ ಗ್ರಾಮದ

ಮಾ. 23-31 : ಸಾಣೂರು ಮುದ್ದಣನಗರ ಬ್ರಹ್ಮಬೈದರ್ಕಳ ಗರಡಿ ಬ್ರಹ್ಮಕಲಶಾಭಿಷೇಕ – ವಾರ್ಷಿಕ ನೇಮೋತ್ಸವ Read More »

ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರಾಗಿ ವಿ. ಸುನಿಲ್‌ ಕುಮಾರ್‌

ಕಾರ್ಕಳ : ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್‌ ಕುಮಾರ್‌ ಅವರನ್ನು ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರನ್ನಾಗಿ ನಿಯುಕ್ತಿ ಮಾಡಲಾಗಿದೆ. ಈ ಕುರಿತು ಮಾ. 14ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕರಾಗಿ ವಿ. ಸುನಿಲ್‌ ಕುಮಾರ್‌ Read More »

ಕಾರ್ಕಳ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ರಾಕೇಶ್‌ ಶೆಟ್ಟಿ ಕುಕ್ಕುಂದೂರು – ಪ್ರಧಾನ ಕಾರ್ಯದರ್ಶಿಗಳಾಗಿ ರಜತ್‌ ರಾಮ್‌ ಮೋಹನ್, ಧನುಷ್‌ ಆಚಾರ್ಯ ಅತ್ತೂರು ಕಾರ್ಕಳ : ಕಾರ್ಕಳ ಬಿಜೆಪಿ ಯುವ ಮೋರ್ಚಾ ಅ‍ಧ್ಯಕ್ಷರಾಗಿ ಉದ್ಯಮಿ ರಾಕೇಶ್‌ ಶೆಟ್ಟಿ ಕುಕ್ಕುಂದೂರು ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮುಡಾರು ಗ್ರಾ.ಪಂ. ಸದಸ್ಯ ರಜತ್‌‌ ರಾಮ್‌ ಮೋಹನ್ ಮುಡಾರು ಹಾಗೂ ಅತ್ತೂರಿನ ಧನುಷ್‌ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಅವರು ಮಾ. 13ರಂದು ಯುವಮೋರ್ಚಾ ನೂತನ ಪದಾಧಿಕಾರಿಗಳ ಹೆಸರು ಪ್ರಕಟಿಸಿದ್ದಾರೆ.

ಕಾರ್ಕಳ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಆಯ್ಕೆ Read More »

ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಉಡುಪಿಗೆ – ಕೋಟ : ದಕ್ಷಿಣ ಕನ್ನಡಕ್ಕೆ – ಚೌಟ ನವದೆಹಲಿ : ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಮಾ. 13ರ ಸಂಜೆ ಪ್ರಕಟವಾಗಿದ್ದು, ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡಕ್ಕೆ ಕ್ಯಾ. ಬ್ರಿಜೇಶ್‌ ಚೌಟ, ಚಿಕ್ಕೋಡಿ ಅಣ್ನಾ ಸಾಹೇಬ್‌ ಶಂಕರ್‌ ಜೊಲ್ಲೆ, ಬಾಗಲಕೋಟೆ ಪಿ.ಸಿ. ಗದ್ದಿಗೌಡರ, ಬಿಜಾಪುರ ರಮೇಶ್‌ ಜಿಗಜಿಣಗಿ, ಗುಲ್ಬರ್ಗ ಡಾ. ಉಮೇಶ್‌ ಜಾಧವ್‌, ಬೀದರ್‌ ಭಗವಂತ

ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ Read More »

ಬಿಜೆಪಿ ಕಾರ್ಕಳ ಮಂಡಲ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ

ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲ ಇದರ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಮಾ. 13ರಂದು ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಪ್ರಕಟಿಸಿರುತ್ತಾರೆ. ಉಪಾಧ್ಯಕ್ಷರಾಗಿ ಅನಂತಕೃಷ್ಣ ಶೆಣೈ, ಮಾಪಾಲು ಜಯವರ್ಮ ಜೈನ್‌, ರವೀಂದ್ರ ಶೆಟ್ಟಿ ಮುಲ್ಲಡ್ಕ, ಹರೀಶ್‌ ನಾಯಕ್‌ ಮರ್ಣೆ, ಜ್ಯೋತಿ ಹರೀಶ್‌ ವರಂಗ, ಪ್ರಮೀಳಾ ಮೂಲ್ಯ ಇರ್ವತ್ತೂರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಸುಮಿತ್‌ ಶೆಟ್ಟಿ ಕೌಡೂರು, ಪ್ರವೀಣ್‌ ಸಾಲ್ಯಾನ್‌ ನಿಟ್ಟೆ, ಕರುಣಾಕರ್‌ ಕೋಟ್ಯಾನ್‌ ಸಾಣೂರು, ಹರ್ಷವರ್ಧನ್‌ ನಿಟ್ಟೆ, ದಿನೇಶ್‌ ಅಜೆಕಾರು, ರೇವತಿ ನಾಯ್ಕ್‌ ಮಿಯ್ಯಾರು, ಖಜಾಂಚಿಯಾಗಿ ಗಿರಿಧರ್‌

ಬಿಜೆಪಿ ಕಾರ್ಕಳ ಮಂಡಲ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ Read More »

error: Content is protected !!
Scroll to Top