ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಪಕ್ಕಾ – ಇಕ್ಬಾಲ್‌ ಹುಸೇನ್‌

ರಾಮನಗರ : ಡಿ. ಕೆ. ಶಿವಕುಮಾರ್ ಮೇ 15ಕ್ಕೆ ಮುಖ್ಯಮಂತ್ರಿ ಆಗೋದು ಫಿಕ್ಸ್ ಆಗಿದೆ. ಹಿಂದೆ ನಾನು ಎರಡ್ಮೂರು ದಿನಾಂಕ ಹೇಳಿದ್ದಾಗ್ಯೂ ವಿವಿಧ ಕಾರಣಕ್ಕಾಗಿ ಆಗಿರಲಿಲ್ಲ. ಈಗಿನದು ಅಂತಿಮ ದಿನಾಂಕ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಮೇ 15ರಂದು ನಮ್ಮ ನಾಯಕನ ಜನ್ಮದಿನ. ಅಂದು ಮುಖ್ಯಮಂತ್ರಿ ಹುದ್ದೆಯ ಉಡುಗೊರೆ ದೊರೆಯಲಿದೆ. ಈ ಅವಧಿಯಲ್ಲೇ ಅವರು ಸಿಎಂ ಆಗಬೇಕು ಮತ್ತು ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಎಂಬುದು ಎಲ್ಲರ ಬಯಕೆ ಎಂದು ಕೇತೋಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಅವರನ್ನೇ ಮುಂದುವರೆಸುವಂತೆ ಮನವಿ ಮಾಡುತ್ತೇವೆ ಎಂಬ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಹುಸೇನ್ ಅವರು ರಾಜಕಾರಣದಲ್ಲಿ ನಾವು ಬದಲಾವಣೆ ಬಯಸಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಅದರಂತೆ, ರಾಜಣ್ಣ ಅವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜಕಾರಣದಲ್ಲಿ ಅಭಿಪ್ರಾಯ ಬೇಧ ಸಹಜ. ಜಾತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗುಂಪುಗಾರಿಕೆ ಇದೆ. ರಾಜಕೀಯವೂ ಅದರಿಂದ ಹೊರತಾಗಿಲ್ಲ ಎಂದರು.





























































































error: Content is protected !!
Scroll to Top