Author name: newskarkala desk

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಡೇವಿಡ್ ಹಂತಕನಿಗೆ ಗುಂಡಿಕ್ಕಿದ ಕಾಪು ಎಸ್‌ಐ ತೇಜಸ್ವಿ

ಉಡುಪಿ : ಕಾಪು ತಾಲೂಕಿನ ಮುದರಂಗಡಿಯಲ್ಲಿ ಜು. 7ರ ಹಾಡಹಗಲೇ ಗ್ರಾ.ಪಂ. ಮಾಜಿ ಅಧ್ಯಕ್ಷ, ಉದ್ಯಮಿ ಡೇವಿಡ್‌ ಡಿಸೋಜಾರನ್ನು ಹತ್ಯೆಗೈದ ಹಂತಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಂತಕ ರಾಜುನನ್ನು 7 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಪು ಠಾಣೆ ಪಿಎಸ್ಐ ತೇಜಸ್ವಿ ಟಿ.ಐ., ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಎಂ.ಎಸ್., ಶಿರ್ವ‌ ಪಿಎಸ್ಐ ಮಂಜುನಾಥ್ ಮರಬದ ಹಾಗೂ ಬೈಂದೂರು ಪಿಎಸ್ಐ ಮಹೇಶ್ ಅವರ ತಂಡವು ಹಂತಕನನ್ನು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಡೇವಿಡ್ ಹಂತಕನಿಗೆ ಗುಂಡಿಕ್ಕಿದ ಕಾಪು ಎಸ್‌ಐ ತೇಜಸ್ವಿ Read More »

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ – ಸಂವಾದ

ಬೆಳ್ತಂಗಡಿ : ಪ್ರತಿಯೊಬ್ಬರಲ್ಲೂ ಅದ್ಭುತ ದೈವೀ ಶಕ್ತಿಯಿದೆ. ಅದನ್ನ ಗುರುತಿಸಿ ಪ್ರಕಟಿಸುವುದೇ ವಿದ್ಯಾಭ್ಯಾಸದ ಮೂಲ ಉದ್ದೇಶ. ಯುವ ಮನಸ್ಸಿನಲ್ಲಿ ಬಹಳಷ್ಟು ಕನಸುಗಳು ತುಂಬಿರುತ್ತವೆ. ಪದವಿ ಪೂರ್ವ ಶಿಕ್ಷಣ ಬದುಕಿನ ಕನಸುಗಳನ್ನು ಸಾಕ್ಷಾತ್ಕಾರಗೊಳಿಸುವ ಅಮೂಲ್ಯ ಸಮಯ. ಮನಸ್ಸನ್ನು ಹಿಡಿತದಲ್ಲಿಟ್ಟು, ಭಾವನೆಗಿಂತ ಮಿಗಿಲಾಗಿ ಶಿಸ್ತು, ಭಕ್ತಿ, ಶ್ರದ್ಧೆಗೆ ಸಮಯ ನೀಡಿದಲ್ಲಿ ಯಶಸ್ಸು ನಿಶ್ಚಿತ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಬೆಳ್ತಂಗಡಿ ಹಿರಿಯ ವಕೀಲರಾದ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ ಗುರುವಾಯನಕೆರೆ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ – ಸಂವಾದ Read More »

34 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

ಪಕ್ಷಭೇದವಿಲ್ಲದೇ ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ – ಸುನಿಲ್‌ ಕುಮಾರ್‌ ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ನಿವೇಶನರಹಿತರಿಗೆ ಹಂತ ಹಂತವಾಗಿ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಆ. 3ರಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 94c ಹಾಗೂ 94cc ಅಡಿ ಒಟ್ಟು 34 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.ಅರ್ಜಿ ಸಲ್ಲಿಸಿದ ಫಲಾನುಭವಿಗಳು ಹಕ್ಕು ಪತ್ರಕ್ಕಾಗಿ ಹತ್ತಾರು ವರ್ಷ ಅಲೆದಾಡುವಂತಾಯಿತು. ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಡೀಮ್ಡ್ ‌ಫಾರೆಸ್ಟ್‌ ಸಮಸ್ಯೆಯಿಂದ

34 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ Read More »

ಡಿಕೆಶಿ ಸಂಪುಟ ವಿಸ್ತರಣೆ – ಸಚಿವರ ಪಟ್ಟಿ ಪ್ರಕಟ

ಎಂಎಲ್‌ಸಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಮಂತ್ರಿಯಾದ ಗಾಯತ್ರಿ – ಲಕ್ಷ್ಮೀಗೆ ಒಲಿಯದ ಭಾಗ್ಯ ಬೆಂಗಳೂರು : ಬಹುದಿನಗಳ ಕಾತರಕ್ಕೆ ಕಾರಣವಾಗಿದ್ದ ಡಿಕೆಶಿ ಸಂಪುಟ ವಿಸ್ತರಣೆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. 20 ಮಂದಿ ಶಾಸಕರು ಡಿಕೆಶಿ ಸಂಪುಟ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್‌ ಗಾಂಧಿ, ಸುರ್ಜೇವಾಲಾ, ಕೆಸಿ ವೇಣುಗೋಪಾಲ್‌ ಅಂತಿಮ ಸಭೆ ನಡೆಸಿ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದಾರೆ. ಪಿಎಂ ನರೇಂದ್ರಸ್ವಾಮಿ – ಮಳವಳ್ಳಿ ಶಾಸಕ, ಶಿವರಾಜ ತಂಗಡಗಿ

ಡಿಕೆಶಿ ಸಂಪುಟ ವಿಸ್ತರಣೆ – ಸಚಿವರ ಪಟ್ಟಿ ಪ್ರಕಟ Read More »

ದಯಾನಂದ ಪೈ ಅವರಿಗೆ ಶೇಖರ್‌ ಅಜೆಕಾರ್‌ ಪ್ರಶಸ್ತಿ

ಆ. 6ರಂದು ರಾಜೇಶ್ವರಿ ಕಾಲೇಜಿನಲ್ಲಿ ಪ್ರದಾನ ಕಾರ್ಕಳ : ಪತ್ರಕರ್ತ, ಸಾಹಿತಿ ದಿ. ಡಾ. ಶೇಖರ್ ಅಜೆಕಾರ್ ಅವರ ಸವಿನೆನಪಿಗಾಗಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ 2025-26ನೇ ಸಾಲಿನ ʼಡಾ. ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ, ಡಂಗುರ ವಾರಪತ್ರಿಕೆಯ ಸಂಪಾದಕ ಕುಂಟಾಡಿ ದಯಾನಂದ ಪೈ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆ. 6ರಂದು ಸಾಣೂರು ರಾಜೇಶ್ವರಿ ಕಾಲೇಜಿನಲ್ಲಿ ನಡೆಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.

ದಯಾನಂದ ಪೈ ಅವರಿಗೆ ಶೇಖರ್‌ ಅಜೆಕಾರ್‌ ಪ್ರಶಸ್ತಿ Read More »

ಶಾಮಿಯಾನ ಸಂಯೋಜಕರ ಒಕ್ಕೂಟ

ಕಾರ್ಕಳ ವಲಯ ಅಧ್ಯಕ್ಷರಾಗಿ ಶಿವಾಜಿ ರಾವ್‌ – ಕಾರ್ಯದರ್ಶಿಯಾಗಿ ಪ್ರಸನ್ನ ಕುಮಾರ್‌ಕಾರ್ಕಳ : ಶಾಮಿಯಾನ ಸಂಯೋಜಕರ ಒಕ್ಕೂಟ ಕಾರ್ಕಳ ವಲಯದ ನೂತನ ಅಧ್ಯಕ್ಷರಾಗಿ‌ ಜನನಿ ಎಂಟರ್‌ಪ್ರೈಸಸ್‌ ಮಾಲಕ ಕಾಬೆಟ್ಟು ಶಿವಾಜಿ ರಾವ್‌ ಹಾಗೂ ಕಾರ್ಯದರ್ಶಿಯಾಗಿ ಕುಕ್ಕುಂದೂರು ದರ್ಶನ್‌ ಎಂಟರ್‌ಪ್ರೈಸಸ್‌ ಮಾಲಕ ಪ್ರಸನ್ನ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಆ. 2ರಂದು ಕಾರ್ಕಳ ದೇವಾಡಿಗರ ಸಭಾಭವನದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ನಾರಾಯಣ ಖಾರ್ವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಉಪಾಧ್ಯಕ್ಷರಾಗಿ ಸಂತೋಷ ತಿರುಮಲ, ಯೋಗಿಶ್‌ ಕೋಟ್ಯಾನ್‌,

ಶಾಮಿಯಾನ ಸಂಯೋಜಕರ ಒಕ್ಕೂಟ Read More »

ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಯಕೃತ್ ಆರೋಗ್ಯ ಜಾಗೃತಿ ಕಾರ್ಯಕ್ರಮ

ಕಾರ್ಕಳ : ವಿಶ್ವ ಹೆಪಟೈಟಿಸ್ ದಿನಾಚರಣೆಯ ಅಂಗವಾಗಿ ಕಾರ್ಕಳ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಹಯೋಗದಲ್ಲಿ ಯಕೃತ್ ಆರೋಗ್ಯ ಮತ್ತು ಹೆಪಟೈಟಿಸ್ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಯಕೃತಿನ ಆರೋಗ್ಯದ ಮಹತ್ವ, ಹೆಪಟೈಟಿಸ್ ತಡೆಗಟ್ಟುವಲ್ಲಿ ಲಸಿಕೆಗಳ ಪಾತ್ರ, ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ

ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಯಕೃತ್ ಆರೋಗ್ಯ ಜಾಗೃತಿ ಕಾರ್ಯಕ್ರಮ Read More »

ಮಣಿಪಾಲ ಜ್ಞಾನಸುಧಾದಲ್ಲಿ ಗುರುಪೂರ್ಣಿಮೆ

ಕಾರ್ಕಳ : ಮಣಿಪಾಲ ವಿದ್ಯಾನಗರ ಜ್ಞಾನಸುಧಾ ಆಂಗ್ಲ ಮಾಧ್ಯಮ ಫ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು. ಹಿರಿಯಡ್ಕದ ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಂ.ಆರ್.‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುರಾಣ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ. ವಿದ್ಯಾರ್ಥಿಗಳ ಬದುಕು ಬೆಳಗಿಸುವ ಕಾರ‍್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಗುರುಗಳನ್ನು ನಾವು ಗೌರವಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಅತಿಥಿಗಳಿಗೆ ಪಾದಪೂಜೆ ನೆರವೇರಿಸಿ ಗುರು ವಂದನೆ ಸಲ್ಲಿಸಲಾಯಿತು.ಮಣಿಪಾಲ ಜ್ಞಾನಸುಧಾ ಆಂಗ್ಲಮಾಧ್ಯಮ ಫ್ರೌಢಶಾಲೆಯ ಉಪಪ್ರಾಂಶುಪಾಲ ನವೀನ್, ಜೆ.ಇ.ಇ/ನೀಟ್‌ ಫೌಂಡೇಶನ್‌ ಸ್ಟ್ಯೂಡೆಂಟ್‌ ಕೋಆರ್ಡಿನೇಟರ್ ಶಮಿತಾ ಉಪಸ್ಥಿತರಿದ್ದರು. ಕನ್ನಡ

ಮಣಿಪಾಲ ಜ್ಞಾನಸುಧಾದಲ್ಲಿ ಗುರುಪೂರ್ಣಿಮೆ Read More »

ಯಶ್ಪಾಲ್‌ ಸುವರ್ಣ ವಿರುದ್ಧ ಕಾರ್ಕಳ ನಗರ ಕಾಂಗ್ರೆಸ್‌ ವತಿಯಿಂದ ದೂರು

ಉಡುಪಿ : ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಯಾವುದೇ ಪುರಾವೆ ಇಲ್ಲದೆ 24 ಗಂಟೆಗಳ ಕಾಲ ನಶೆಯಲ್ಲಿ ಇರುತ್ತಾರೆ ಎಂದು ನಿರಾಧಾರ ಹಾಗೂ ಮಾನಹಾನಿಕರ ಆರೋಪ ಮಾಡಿರುವುದು, ರಾಹುಲ್ ಗಾಂಧಿ ಅವರ ವಂಶವನ್ನು ಧ್ವಂಸ ಮಾಡುತ್ತೇವೆ ಎಂಬ ಬೆದರಿಕೆಯ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ದ್ವೇಷ, ಉದ್ವಿಗ್ನತೆ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾರ್ಕಳ ನಗರ ಯುವ ಕಾಂಗ್ರೆಸ್ ವತಿಯಿಂದ

ಯಶ್ಪಾಲ್‌ ಸುವರ್ಣ ವಿರುದ್ಧ ಕಾರ್ಕಳ ನಗರ ಕಾಂಗ್ರೆಸ್‌ ವತಿಯಿಂದ ದೂರು Read More »

ನಿವೃತ್ತ ಯೋಧ ನೀರೆ ಸಹದೇವ ನಾಯಕ್ ಅಸ್ತಂಗತ

ಕಾರ್ಕಳ : ನಿವೃತ್ತ ಯೋಧ, ಹಿರಿಯ ಭೂಮಾಪನ ಸರ್ವೆಯರ್, ಪ್ರಗತಿಪರ ಕೃಷಿಕ ನೀರೆ ಸಹದೇವ ನಾಯಕ್ (67) ಅಲ್ಪಕಾಲದ ಅಸೌಖ್ಯದಿಂದ ಜು. 29ರಂದು ನಿಧನ ಹೊಂದಿದರು. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು ನಿವೃತ್ತಿ ಅನಂತರ ಊರಿಗೆ ಆಗಮಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳೀಯ ಯುನಿಟಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಬುಧವಾರ ಸಂಜೆ 8 ಗಂಟೆಗೆ ನೀರೆಯ ಸ್ವಗೃಹದಲ್ಲಿ

ನಿವೃತ್ತ ಯೋಧ ನೀರೆ ಸಹದೇವ ನಾಯಕ್ ಅಸ್ತಂಗತ Read More »

error: Content is protected !!
Scroll to Top