ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಮಂಗಳೂರಿನ ಚರ್ಚೊಂದರ ಧರ್ಮಗುರುವಿನ ಮೇಲೆ ದೂರು ದಾಖಲು

ಮಂಗಳೂರು: ನಗರದ ಚರ್ಚೊಂದರ ಧರ್ಮಗುರು ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಧರ್ಮಗುರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಚಾಕೆಟ್ ನೀಡಿ, ‘ಯು ಆರ್ ಎ ಸ್ವೀಟ್ ಬಾಯ್’, ‘ನಿನ್ನ ನಗು ಚೆನ್ನಾಗಿದೆ’, ‘ಐ ಲವ್ ಯು’ ಎಂದೆಲ್ಲ ಹೇಳಿ ಪುಸಲಾಯಿಸಿ, ಚರ್ಚ್ ನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಮಾತ್ರವಲ್ಲದೆ ಆಗಸ್ಟ್ 14ರಂದು ಸಂಜೆ 6.30ಕ್ಕೆ ಬಾಲಕ ಚರ್ಚಿಗೆ ಪ್ರಾರ್ಥನೆಗೆ ಹೋದಾಗಲೂ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಸ್ನೇಹಿತರಲ್ಲಿ ತಿಳಿಸಿದಾಗ ಅವರಿಗೂ ಇದೇ ರೀತಿ ನಿರಂತರವಾಗಿ ದೌರ್ಜನ್ಯ ಎಸಗಿರುವುದಾಗಿ ತಿಳಿಸಿರುವುದಾಗಿ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.

ಬಾಲಕ ಹೆತ್ತವರಿಗೆ ತಿಳಿಸಿದ್ದು, ಅವರು ಬಿಷಪ್ ಅವರ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರು ಪೊಲೀಸರಿಗೆ ದೂರು ನೀಡುವಂತೆ ನಿರ್ದೇಶಿಸಿದಂತೆ ದೂರು ನೀಡುತ್ತಿರುವುದಾಗಿ ಉಲ್ಲೇಖಿಸಿಸಲಾಗಿದೆ. ಅದರಂತೆ ಆರೋಪಿತ ಧರ್ಮಗುರುವಿನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











































































error: Content is protected !!
Scroll to Top