ಮದುವೆಯ ವಿಷಯದಲ್ಲಿ ಅಸಮಾಧಾನ: ಮಗಳನ್ನೇ ಕೊಂದು ಮಣ್ಣು ಮಾಡಿದ ತಂದೆ

ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಯುವತಿ ನಾಪತ್ತೆ ಪ್ರಕರಣದ ಕರಾಳ ಸತ್ಯ

ಶಿರಾ: ಕಳೆದ ಒಂದು ತಿಂಗಳ ಹಿಂದೆ ನಾಪತ್ತೆ, ಕೊಲೆಯಾಗಿದ್ದ 17 ವರ್ಷದ ಮೇಘನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವೊಂದು ಬೆಳಕಿಗೆ ಬಂದಿದೆ.

ಮೇಘನಾಳನ್ನು ಆಕೆಯ ತಂದೆ ತಿಮ್ಮರಾಯಪ್ಪನೇ ಬಾವಿಗೆ ತಳ್ಳಿ, ಕಲ್ಲೆಸೆದು ಕೊಂದು ಬಳಿಕ ಶವವನ್ನು ತೆಗೆದು ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ್ದಾಗಿ ತಿಳಿದು ಬಂದಿದೆ. ಆಕೆಯ ಮದುವೆಗೆ ಸಂಬಂಧಿಸಿದ ಹಾಗೆ ಕುಟುಂಬದಲ್ಲಿ ಎದ್ದಿದ್ದ ಚರ್ಚೆ, ಈ ಸಂಬಂಧ ತಿಮ್ಮರಾಯಪ್ಪನಿಗಾದ ಅಸಮಾಧಾನದಿಂದ ಮಗಳ ಜೀವವನ್ನೇ ತೆಗೆದಿರುವುದಾಗಿ ಪೊಲೀಸರಿಗೆ ತನಿಖೆಯಲ್ಲಿ ಗೊತ್ತಾಗಿದೆ.

ಮಗಳನ್ನು ಯಾರಿಗೂ ತಿಳಿಯದಂತೆ ಕೊಂದು, ಮಣ್ಣು ಮಾಡಿ ತನ್ನ ಮೇಲೆ ಯಾರಿಗೂ ಸಂದೇಹ ಬರಬಾರದು ಎನ್ನುವ ದೃಷ್ಟಿಯಿಂದ ತಿಮ್ಮರಾಯಪ್ಪ ತನ್ನ ಪತ್ನಿಯ ಜೊತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಮಗಳು ನಾಪತ್ತೆಯಾಗಿದ್ದಾಗಿ ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸುವಾಗ ತಿಮ್ಮರಾಯಪ್ಪನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಒಟ್ಟಿನಲ್ಲಿ ಮದುವೆಯ ವಿಚಾರದಲ್ಲಿನ ಮನಸ್ತಾಪ ಮಗಳನ್ನು ಮಣ್ಣು ಮಾಡುವಲ್ಲಿಗೆ ಮುಟ್ಟಿದ್ದು ದುರಂತವೇ ಸರಿ.













































































error: Content is protected !!
Scroll to Top