ಅ.18: ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಜಾರು ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕಾರ್ಕಳ: ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಜಾರು ಇವರ ವತಿಯಿಂದ ಕಣಜಾರು ಪಟೇಲರಾದ ಶ್ರೀ ಶೇಖರ ಹೆಗ್ಡೆಯವರ ಜನ್ಮ ಶತಾಬ್ದ ವರ್ಷದ ನೆನಪಿನ ಜೊತೆಗೆ ಜಿಲ್ಲಾ ರಕ್ತದಾನ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಅ. 18 ರ ಭಾನುವಾರದಂದು ಮಡಿಬೆಟ್ಟು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಶ್ರೀ ಮೇಲ್ಪಂಟ ಫ್ರೆಂಡ್ಸ್, ಹಡಂಕೋಳಿ ಫ್ರೆಂಡ್ಸ್, ನಮ್ಮ ಜವನೆರ್ ಕಣಜಾರು, ಪೆಲತ್ತೂರು ಫ್ರೆಂಡ್ಸ್, ಮಹಾಲಿಂಗೇಶ್ವರ ಭಜನಾ ಮಂಡಳಿ ಪೆಲತ್ತೂರು, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕಣಜಾರು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಸಹಾಯ ಸಂಘ ಕಣಜಾರು ಒಕ್ಕೂಟ ಇವುಗಳ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













































































error: Content is protected !!
Scroll to Top