ಮದ್ಯಪಾನ ಮಾಡಿ ಜಗಳವಾಡುತ್ತಿದ್ದ ಮಗನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಂದೆ: ಪ್ರಕರಣ ದಾಖಲು

ಕಾರ್ಕಳ: ಕೌಟುಂಬಿಕ ಕಲಹದಲ್ಲಿ ‌ತಂದೆಯೇ ಮಗನಿಗೆ ಕತ್ತಿಯಿಂದ ‌ಕಡಿದು ಗಾಯಗೊಳಿಸಿದ ಘಟನೆ ತೆಳ್ಳಾರಿನಲ್ಲಿ ನಡೆದಿದೆ.

ಗಾಯಾಳುವನ್ನು ಚಾಲ್ಸ್ ‌ಎಂದು ಗುರುತಿಸಲಾಗಿದೆ.

ಪಿರ್ಯಾದಿದಾರರಾದ ತ್ರೆಸಿಯಾಮ್‌ (65), ತೆಳ್ಳಾರ್‌ ದುರ್ಗಾ ಗ್ರಾಮ, ಕಾರ್ಕಳ ಇವರು ಕೇರಳ ರಾಜ್ಯದವರಾಗಿದ್ದು ಪ್ರಸ್ತುತ ಕಾರ್ಕಳ ತಾಲೂಕು ತೆಳ್ಳಾರ್‌ ದುರ್ಗಾ ಗ್ರಾಮದ ಪುಲ್ಲಾಟ್‌ ಎಂಬಲ್ಲಿ ಗಂಡ ಮಥಾಯ್‌ ಮಗ ಚಾಲ್ಸ್‌ ಮೊಮ್ಮಗಳು ಸಾನ್ವಿ ಯೊಂದಿಗೆ 17 ವರ್ಷಗಳಿಂದ ವಾಸವಾಗಿದ್ದಾರೆ. ದೊಡ್ಡ ಮಗ ಚೆಂಚಲ್ ಬಿ.ಎಸ್.ಎಫ್‌ ನಲ್ಲಿ ನಿವೃತ್ತಿ ಹೊಂದಿ ಮಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುತ್ತಾರೆ.

ಪಿರ್ಯಾದುದಾರರ ಮಗ ಚಾಲ್ಸ್‌ ಮದ್ಯಪಾನ ಚಟ ಹೊಂದಿದ್ದು ಅವರ ಹೆಂಡತಿ 2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ತಮ್ಮ ಮನೆಯ ಪಕ್ಕ ಹೊಸ ಮನೆಯನ್ನು ಕಟ್ಟುತ್ತಿದ್ದು ದಿನಾಂಕ ಸೆ. 28ರಂದು ಪಿರ್ಯಾದಿದಾರರ ಹಳೆಯ ಮನೆಯಲ್ಲಿ ಪಿರ್ಯಾದಿದಾರರ ಜೊತೆ ಮಗ ಚಾಲ್ಸ್‌ ಹೊಸ ಮನೆಯನ್ನು ನನಗೆ ಬಿಟ್ಟು ಕೊಡ ಬೇಕೆಂದು ಜಗಳವಾಡುತ್ತಿದ್ದು ಈ ವೇಳೆಗೆ ಪಿರ್ಯಾದಿದಾರರ ಗಂಡ ಜಗಳ ಬಿಡಿಸಲು ಬಂದಾಗ ಅವರನ್ನು ತಳ್ಳಿದ್ದು ಆಗ ಮಥಾಯ್ ಅವರು ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ. ನಂತರ ಹೊಸದಾಗಿ ಕಟ್ಟುತ್ತಿರುವ ಮನೆಯ ಶೆಡ್ಡ್‌ ಮುಂದೆ ಪಿರ್ಯಾದಿದಾರರ ಗಂಡ ಕುಳಿತುಕೊಂಡಿರುವಾಗ ವಾಪಸು ಮಗ ಚಾಲ್ಸ್‌ ತಂದೆಗೆ ಹೊಡೆಯಲು ಬಂದಾಗ ತಂದೆ ಅಲ್ಲಿ ಇದ್ದ ತೋಟದ ಕೆಲಸಕ್ಕೆ ಬಳಸುವ ಕತ್ತಿಯಿಂದ ನಿನ್ನ ಉಪದ್ರ ಸಾಕಾಗಿದೆ ನಿನ್ನ ಕೊಂದೆ ಬಿಡುತ್ತೇನೆ ಎಂದು ಕತ್ತಿಯಿಂದ ಚಾಲ್ಸ್‌ ನನ್ನು ಕಡಿದ ಪರಿಣಾಮ ಚಾಲ್ಸ್‌ ನ ಕುತ್ತಿಗೆಯ ಭಾಗ ಹಾಗೂ ಎದೆಯ ಭಾಗಕ್ಕೆ ತೀವ್ರ ತರವಾದ ರಕ್ತ ಗಾಯಾವಾಗಿದ್ದು, ನಂತರ ಪಿರ್ಯಾದಿದಾರರ ಸಂಬಂಧಿ ವಿಬಿನ್ ಅವರು ಒಂದು ಅಂಬುಲೆನ್ಸ್‌ ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2026 ಕಲಂ: 109 (1) ,118(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

















































































error: Content is protected !!
Scroll to Top