ಸೆ. 27: ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ವತಿಯಿಂದ ಜಾಗೃತಿ ವಾಕ್‌ಥಾನ್

ಕಾರ್ಕಳ: ವಿಶ್ವ ಹೃದಯ ದಿನ 2026ರ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ, ಸಹಯೋಗದಲ್ಲಿ ಸೆ. 27ರ ಭಾನುವಾರದಂದು ವಾಕ್‌ಥಾನ್ ಆಯೋಜಿಸಲಾಗಿದೆ.

ಕಾರ್ಕಳದ ಅನಂತಶಯನ ವೃತ್ತದಿಂದ ಆರಂಭವಾಗಿ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗೆ ತಲುಪಲಿದೆ. ಕಾರ್ಕಳ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ಗಳು ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಾಕ್‌ಥಾನ್ ಸಂದರ್ಭದಲ್ಲಿ ಕಾಲೇಜುವಾರು ಅತಿ ಹೆಚ್ಚು ಭಾಗವಹಿಸುವಿಕೆ, ಘೋಷವಾಕ್ಯ (ಸೋಗನ್ ಶೌಟಿಂಗ್) ಸ್ಪರ್ಧೆ, ಅತ್ಯಂತ ಶಿಸ್ತುಬದ್ಧ ತಂಡ ಹಾಗೂ ಪ್ರಕಾರ್ಡ್ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಾಕ್‌ಥಾನ್ ನಂತರ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಆವರಣದಲ್ಲಿ ಸ್ಕಿಟ್ ಸ್ಪರ್ಧೆ ನಡೆಯಲಿದೆ.

ಆ ನಂತರ ಡಾ ಕಾರ್ತಿಕ್ ರಾವ್ (ಸೀನಿಯರ್ ಫಿಸಿಷಿಯನ್), ಕಾರ್ಕಳ ಅವರು ಹೃದಯದ ಆರೋಗ್ಯ ಹಾಗೂ ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಜಾಗೃತಿ ಶಿಕ್ಷಣ ನಡೆಸಲಿದ್ದಾರೆ. ರೋಟರಿ ಕ್ಲಬ್ ಹಾಗೂ ಆಸ್ಪತ್ರೆಯ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಕುರಿತು ಮಾತನಾಡಿದಿದ್ದು, ಡಾ. ಸಂಜಯ್ ಕುಮಾರ್ (ಮುಖ್ಯ ವೈದ್ಯಾಧಿಕಾರಿ, ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ, ಕಾರ್ಕಳ) ಅವರು, “ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ವತಿಯಿಂದ ಪ್ರತಿವರ್ಷ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಈ ವಾಕ್‌ಥಾನ್ ಮೂಲಕ ಪ್ರತಿಯೊಬ್ಬರೂ ತಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಲು ಪ್ರೇರೇಪಿತರಾಗಬೇಕು. ಆರೋಗ್ಯಕರ ಹೃದಯದತ್ತ ಇದು ಪ್ರತಿಯೊಬ್ಬರ ಮೊದಲ ಹೆಜ್ಜೆಯಾಗಲಿ”. ಎಂದು ಹೇಳಿದರು.

ಹೃದಯದ ಆರೋಗ್ಯದ ತಪಾಸಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಸೆ. 30, 2026ರವರೆಗೆ ವಿಶೇಷ ರಿಯಾಯಿತಿ ದರದಲ್ಲಿ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್ ಲಭ್ಯವಿದೆ. ಹೃದಯದ ಆರೋಗ್ಯವನ್ನು ಪರಿಶೀಲಿಸುವುದು, ಅಗತ್ಯವಿದ್ದಲ್ಲಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಹಾಗೂ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಈ ಪ್ಯಾಕೇಜ್ ಹೊಂದಿದೆ. ಈ ಸೇವೆ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಮಾತ್ರ ಲಭ್ಯವಿರುತ್ತದೆ.

ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿಯ ಅಧ್ಯಕ್ಷ ಮಂಜುನಾಥ್ ಹೆಗ್ಡೆ ಮಾತನಾಡಿ, ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ರೋಟರಿ ಕ್ಲಬ್‌ನ ಬದ್ಧತೆಯಾಗಿದೆ ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ವಾಕ್‌ಥಾನ್ನಲ್ಲಿ ಭಾಗವಹಿಸಿ, ಹೃದಯದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಸುರೇಂದ್ರ ನಾಯಕ್ ನಿ.ಪೂ ಅಧ್ಯಕ್ಷ ರೋಟರಿ ರಾಕ್ ಸಿಟಿ.ಪ್ರಮುಖರಾದ ಉಪೆಂದ್ರ ವಾಗ್ಲೆ..
ಆಸ್ಪತ್ರೆ ಮಾರುಕಟ್ಟೆ ವಿಭಾಗದ ಆ್ಯಶ್ಲನ್‌ ಉಪಸ್ಥಿತರಿದ್ದರು..

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಸಹಾಯವಾಣಿ – 9731601150/08258-230583 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.































error: Content is protected !!
Scroll to Top