ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ: ನವರಾತ್ರಿ ಪ್ರಯುಕ್ತ ವಿಶ್ವಕರ್ಮ ಬಾಂಧವರಿಗೆ ವಿವಿಧ ಸ್ಪರ್ಧೆಗಳು

ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಕಾರ್ಕಳ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ. 4, ರವಿವಾರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಸ್ಪರ್ಧೆಗಳನ್ನು ಸ್ವಸಮಾಜ ಬಾಂಧವರಿಗೆ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.

ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ – ಫಲವಸ್ತು ಚಿತ್ರ ಬಿಡಿಸಲು ಮತ್ತು ಒಂದು ನಿಮಿಷ ಸ್ಪರ್ಧೆ, ಎರಡರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ವಿಷಯ ಮನೆ, ತೆಂಗಿನಮರ ಹಾಗೂ ಭಕ್ತಿಗೀತೆ ಸ್ಪರ್ಧೆ, 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ – ಯಕ್ಷಗಾನ ವೇಷ, ಭಾವ ಗೀತೆ/ಜಾನಪದ ಗೀತೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಚಿತ್ರಕಲೆ – ಶ್ರೀ ವಿಶ್ವಕರ್ಮ ಮತ್ತು ಭಾವ ಗೀತೆ/ಜಾನಪದ ಗೀತೆ ಮಹಿಳೆಯರಿಗೆ ಶ್ರೀ ಕಾಳಿಕಾಂಬಾ ಸ್ತೋತ್ರ ಪಠಣೆ, ರಂಗೋಲಿ ಸ್ಪರ್ಧೆ (ಹೂವಿನಿಂದ, ಸ್ಪರ್ಧಾಳುಗಳು ಪರಿಕರಗಳನ್ನು ತಾವೇ ತರಬೇಕು), ಬೆಂಕಿ ಇಲ್ಲದೆ ಅಡುಗೆ ಸ್ಪರ್ಧೆ (ಸ್ಪರ್ಧಾಳುಗಳು ಸಾಮಾಗ್ರಿಗಳನ್ನು ತಾವೇ ತರಬೇಕು) ಸ್ಥಳದಲ್ಲಿ ತಯಾರಿಸಬೇಕು. ಪುರುಷರಿಗೆ ಒಂದು ನಿಮಿಷದ ಸ್ಪರ್ಧೆ ನಡೆಯಲಿದೆ.

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನೋಂದಾವಣೆಗಾಗಿ 9036860635, 9844994890 ಸಂಪರ್ಕ ಮಾಡಬೇಕಾಗಿ ವಿನಂತಿಸಲಾಗಿದೆ.











































error: Content is protected !!
Scroll to Top