ಎಸ್.ಐ.ಆರ್.ಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪ್ರಸ್ತುತ ವಿವರ

ಉಡುಪಿ: ಮುಖ್ಯ ಚುನಾವಣಾಧಿಕಾರಿಗಳ (CEO) ನಿರ್ದೇಶನದಂತೆ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2026 (SIR), ಮತದಾರರ ನೋಂದಣಿ ಮತ್ತು ನೋಟೀಸ್‌ಗಳ ವಿಲೇವಾರಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಇತ್ತೀಚಿನ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ 10,00,754 ಮತದಾರರಿದ್ದು, ಇವರಲ್ಲಿ 4,84,236 ಪುರುಷರು, 5,16,509 ಮಹಿಳೆಯರು, 9 ತೃತೀಯ ಲಿಂಗಿಗಳು ಇದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 1,244 ಮತದಾನ ಕೇಂದ್ರಗಳಿವೆ.

ಜಿಲ್ಲೆಗೆ ಸಂಬಂಧಿಸಿದಂತೆ 97,673 ನೋಟೀಸ್‌ಗಳನ್ನು
ಸೃಜಿಸಲಾಗಿದ್ದು, 96716 ನೋಟೀಸ್ ಗಳನ್ನು ವಿತರಿಸಿ, ಶೇ. 99.02 ರಷ್ಟು ಸಾಧನೆ ಮಾಡಲಾಗಿರುತ್ತದೆ. 959 ನೋಟೀಸ್‌ಗಳು ವಿತರಣೆಗೆ ಬಾಕಿ ಇರುತ್ತವೆ. ವಿತರಿಸಲಾದ ನೋಟಿಸ್‌ಗಳಲ್ಲಿ 58,913 ವಿಚಾರಣೆಗಳು ಪೂರ್ಣಗೊಂಡಿದ್ದು, 37, 803 ನೋಟೀಸ್‌ಗಳ ವಿಚಾರಣೆಗಳು ಬಾಕಿ ಇರುತ್ತವೆ.

ವಿಚಾರಣೆ ನಡೆಸಲು ಅಕ್ಟೋಬರ್ 12 ಕೊನೆಯ ದಿನ. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಕ್ಟೋಬರ್ 27 ರಂದು
ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ.

ಜಿಲ್ಲೆಯಲ್ಲಿ ಒಟ್ಟು 44,841 ಅರ್ಜಿಗಳು (ನಮೂನೆ 6, 6A, 7, ಮತ್ತು 8) ಸ್ವೀಕೃತವಾಗಿದ್ದು, ಇದರಲ್ಲಿ ನಮೂನೆ 6 (ಹೊಸ ಮತದಾರರ ಸೇರ್ಪಡೆ)ಗೆ 12,200 ಅರ್ಜಿಗಳು, ನಮೂನೆ 6A (ಅನಿವಾಸಿ ಭಾರತೀಯರು) ಗೆ 340 ಅರ್ಜಿಗಳು, ನಮೂನೆ 7 (ಆಕ್ಷೇಪಣೆ ಹೆಸರು ತೆಗೆದುಹಾಕುವುದು) ಗೆ 2006 ಅರ್ಜಿಗಳು ಹಾಗೂ ನಮೂನೆ 8 (locating ತಿದ್ದುಪಡಿ/ಬದಲಿ EPIC/ವಿಕಲಚೇತನರ ಗುರುತಿಸುವಿಕೆ)ಗೆ 37, 454 ಅರ್ಜಿಗಳು ಸೇರಿವೆ.

ಅಕ್ಟೋಬರ್ 1, 2026 ಕ್ಕೆ 18 ವರ್ಷ ಭರ್ತಿಯಾಗುವ ಯುವಕ ಯುವತಿಯರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹಿರಿಯ ನಾಗರಿಕರು, ವಿಕಲಚೇತನರು ಮತ್ತು (NRI)ಅನಿವಾಸಿ ಭಾರತೀಯರಿಗೆ ವಿಶೇಷ ರಿಯಾಯಿತಿ :
ಹಿರಿಯ ನಾಗರಿಕರು, ವಿಕಲ ಚೇತನರು, ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ ಭಾರತೀಯರ ಪರವಾಗಿ ಅವರ ಕುಟುಂಬದ ಪ್ರೌಢ ಸದಸ್ಯರೊಬ್ಬರು ನಂಬಂಧಪಟ್ಟ ERO/AERO ಕಚೇರಿಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳು/ಮಾಹಿತಿಯನ್ನು ಸಲ್ಲಿಸಿ ನೋಟೀಸ್ ವಿಲೇವಾರಿ ಮಾಡಲು ಅವಕಾಶ ನೀಡಲಾಗಿದೆ.

ಮತದಾನ ಕೇಂದ್ರಗಳ ಪುನರಚನೆ ಹಾಗೂ ಸರಣಿ ಸಂಖ್ಯೆಗಳ ಬದಲಾವಣೆಯಿಂದಾಗಿ, ಕೆಲ ಮತದಾರರ ಭಾಗದ (Part Number) ಅಥವಾ ಕ್ರಮ ಸಂಖ್ಯೆ (Serial Number) ಬದಲಾಗಿರಬಹುದಾಗಿದ್ದು, ಹಳೆಯ ಭಾಗದ ಸಂಖ್ಯೆಯಲ್ಲಿ ಹೆಸರು ಸಿಗದ ಮತದಾರರು ತಮ್ಮ EPIC ಸಂಖ್ಯೆಯನ್ನು ಬಳಸಿ voters.eci.gov.in ವೆಬ್‌ ಸೈಟ್ ಅಥವಾ ECINET ಮೊಬೈಲ್ ಆಪ್ ಮೂಲಕ ತಮ್ಮ ಹೆಸರನ್ನು ಹುಡುಕಬಹುದಾಗಿದೆ.

ಅರ್ಜಿ (Form 6) ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ voters.eci.gov.in ವೆಬ್‌ ಸೈಟ್ ಅಥವಾ
ECINET ಆಪ್ ಮೂಲಕ ಅಗತ್ಯ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ (ವಯಸ್ಸು ಮತ್ತು ವಿಳಾಸದ ಪುರಾವೆ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಭರ್ತಿ ಮಾಡಿದ ನಮೂನೆ 6 ಮತ್ತು ಘೋಷಣಾ ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಥವಾ ERO/AERO ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 1950 / 1800 4255 1950 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.











































error: Content is protected !!
Scroll to Top