ಹೆಬ್ರಿ: ಉಡುಪಿ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕರ ವಿಭಾಗದ ಹೆಬ್ರಿಯಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಕೊಳಕೆ ತಂಡವು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
14ರ ವಯೋಮಾನ ಮತ್ತು 17ರ ವಯೋಮಾನದ ನಾಲ್ಕು ಪ್ರಶಸ್ತಿಗಳು ಕಾರ್ಕಳ ತಾಲೂಕಿನ ಪಾಲಾಗಿದ್ದು ಅದರಲ್ಲಿಯೂ ಪ್ರಶಸ್ತಿ ಪಡೆದ ಏಕ ಮಾತ್ರ ಸರಕಾರಿ ಶಾಲೆ ಇರ್ವತ್ತೂರು ಕೊಳಕೆ. ಕಳೆದ ಬಾರಿ ಉಡುಪಿ ಜಿಲ್ಲಾ ಮಟ್ಟಕ್ಕೆ ಮೂರು ತಂಡಗಳನ್ನು ಕೊಂಡೊಯ್ದ ಕೀರ್ತಿ ಇರ್ವತ್ತೂರು ಶಾಲೆಯದ್ದಾಗಿದೆ.







































