ಉಡುಪಿ: ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಹಾಗೆ ಪ್ರತ್ಯೇಕ ಪ್ರಕರಣಗಳಲ್ಲಿ ಶಿರ್ವ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರ್ವದಲ್ಲಿ ಬಂಧಿಸಲಾದ ಆರೋಪಿಗಳನ್ನು ಅಲ್ನಾಜ್ ಯಾನೆ ಮೊಹಮ್ಮದ್ ಅನಾಸ್, ಮಹಮ್ಮದ್ ಅಲ್ತಾಪ್, ಸ್ಪ್ಯಾನಿ ಸಂದೀಪ್, ಶಾಕೀಬ್, ಮಹಮ್ಮದ್ ಫೈಜಲ್, ಇಮ್ಮಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1354.28 ಗ್ರಾಂ (ಮೌಲ್ಯ ₹67,714/-) , 32.74 ಗ್ರಾಂ ( ಮೌಲ್ಯ ₹1,30,960/-) ಮೆಥಾಂಫೆಟಮೈನ್, 2 ಕಾರುಗಳು ಹಾಗೂ ಸ್ಕೂಟರ್, 9 ಮೊಬೈಲ್ ಫೋನ್‌ಗಳು (₹93,300/-), 2 ತೂಕದ ಯಂತ್ರಗಳು (₹500/-) ಮತ್ತು ನಗದು 75,010 ರೂಪಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತರುತ್ತಿರುವುದಾಗಿ ತಿಳಿಸಿದ್ದು, ಇವರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಉಡುಪಿಗೆ ಸಂಬಂಧಿಸಿದ ಹಾಗೆ ಆರೋಪಿ ಶ್ರೀವತ್ಸ ಕೆ. ಜಿ. ಎಂಬಾತನನ್ನು ಬಂಧಿಸಿದ್ದಾರೆ. ಆರೋರಿಯಿಂದ 1 ಕೆಜಿ 659.91 ( *83,000/-), ರೂ.1,26,500/- 3 ಡಿಜಿಟಲ್ ತೂಕದ ಸ್ಕೇಲ್ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.





















