ಕಾರ್ಕಳ: ಪ್ರಸಕ್ತ ವರ್ಷದ ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಕೋಶವನ್ನು ಕಾರ್ಕಳದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಹೆಣ್ಣು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಒಬ್ಬ ಪುರುಷನಿಗೆ ಶಿಕ್ಷಣ ಕೊಟ್ಟರೆ ಒಬ್ಬ ವ್ಯಕ್ತಿಗೆ ಶಿಕ್ಷಣ ಕೊಟ್ಟಂತೆ. ಅದೇ ಒಬ್ಬ ಮಹಿಳೆಗೆ ಶಿಕ್ಷಣ ಕೊಟ್ಟರೆ ಇಡೀ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಶಿಕ್ಷಣ ಕೊಟ್ಟಂತೆ . ಹೆಣ್ಣು ಅಬಲೆಯಲ್ಲ, ಅವಳು ಸಬಲೆ. ಮಹಿಳೆ ಕೇವಲ ಮನೆಗೆ ಸೀಮಿತವಾಗದೆ, ಉದ್ಯೋಗ ಮತ್ತು ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಪ್ರೊ |ಗೀತಾ ಜಿ. ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕಿ ಧನ್ಯ ಸ್ವಾಗತಿಸಿ, ಸಹನಾ ನಿರ್ವಹಿಸಿದರು. ಶ್ರೀಲಕ್ಷ್ಮಿ ರಾವ್ ಧನ್ಯವಾದ ಸಮರ್ಪಿಸಿದರು.







































