ವಾಷಿಂಗ್ಟನ್: ಭಾರತೀಯರನ್ನು ಗುರಿಯಾಗಿಸಿಕೊಂಡು ದೇವಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ ಸಂಚು ಮಾಡಿದ್ದ 19 ವರ್ಷದ ಅಮೆರಿಕನ್ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯನ್ನು ಅಲೆಕ್ಸಾಂಡ್ರೋಸ್ ಪಾಪೊರಾಕಿಸ್ ಎಂದು ಗುರುತಿಸಲಾಗಿದೆ. ಅಮೆರಿಕದ ಇಲಿನಾಯ್ಸ್ನಲ್ಲಿರುವ ದೇವಾಲಯದಲ್ಲಿ ಗುಂಡಿನ ದಾಳಿಗೆ ತಯಾರಿ ಮಾಡಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಗನ್ಗಳನ್ನು ತಯಾರು ಮಾಡಿಕೊಂಡು ಬಂದಿದ್ದ. ಆದರೆ ಕೊನೆಯ ನಿಮಿಷದಲ್ಲಿ ರೈಫಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಜನರ ಪ್ರಾಣ ಉಳಿದಿದೆ. ಜೊತೆಗೆ ಆತ ನಡೆಸಿದ್ದ ಸಂಚು ಜನರ ಗಮನಕ್ಕೆ ಬಂದಿದೆ. ಪಾಲಟೈನ್ ನಿವಾಸಿಯಾಗಿರುವ ಅಲೆಕ್ಸಾಂಡೋಸ್ ಟಾಕೋ ಬೆಲ್ನಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಇಲಿನಾಯ್ಸನ ಅರೋರಾ ನಗರದ ನೈಋತ್ಯ ಉಪನಗರದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿ ಸಾಮೂಹಿಕ ಗುಂಡಿನ ದಾಳಿ ನಡೆಸಲು ಈತ ಯೋಜಿಸಿದ್ದ. ಆತನ ಬಳಿ ರೈಫಲ್, 300 ಸುತ್ತುಗಳ ಗುಂಡುಗಳು, ರಕ್ಷಣಾ ಕವಚ, ಪೆಟ್ರೋಲ್ ಕ್ಯಾನ್ ಹಾಗೂ ಸ್ವಸ್ತಿಕ್ ಚಿಹ್ನೆಗಳಿದ್ದವು.ಮರೈಫಲ್ ಹಾಳಾಗಿ ಗುಂಡು ಹಾರಿಸಲು ಸಾಧ್ಯವಾಗಿಲ್ಲ.ಇದನ್ನು ಹೇಗೆ ಸರಿಪಡಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡಿದ್ದಾನೆ. ಇಷ್ಟೇ ಅಲ್ಲದೇ ಸಹೋದ್ಯೋಗಿಗೆ ಕರೆ ಮಾಡಿ ಭಾರತೀಯರನ್ನು ಕೊಲ್ಲುತ್ತೇನೆ ಎಂದೂ ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.





































