ಎಣ್ಣೆಹೊಳೆ ನದಿ ಸಮೀಪ ಸಿಕ್ಕ ಮೃತದೇಹದ ಗುರುತು ಪತ್ತೆ

ಕಾರ್ಕಳ: ಅಜೆಕಾರಿನ ಎಣ್ಣೆಹೊಳೆ ಸೇತುವೆ ಕೆಳಭಾಗದಲ್ಲಿ ಸಿಕ್ಕ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತರನ್ನು ಕಣಜಾರು ಕಡಬೆರ್ಕೆಯ ಸುರೇಶ್ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಕರು ಶವವನ್ನು ಗುರುತಿಸಿದ್ದಾರೆ.

ಅವರು ಸುಮಾರು ಹದಿನೈದು ವರ್ಷಗಳ ಕಾಲ ಮುಂಬೈನಲ್ಲಿದ್ದು, ಊರಿಗೆ ಬಂದ ಬಳಿಕ ಯೆಯ್ಯಾಡಿಯ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅ. 9 ರಂದು ಅವರು ನಾಪತ್ತೆಯಾಗಿದ್ದರು. ಕೊನೆಯದಾಗಿ ಅವರು ಕಟೀಲು ದುರ್ಗಾಪರಮೇಶ್ವರಿ ದೇಗುಲದ ಸಮೀಪ ಕಾಣಿಸಿಕೊಂಡಿದ್ದರು. ಆ ಬಳಿಕ ಅಂಗಡಿಯೊಂದರಲ್ಲಿ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು.

ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.











































































error: Content is protected !!
Scroll to Top