ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ತೂಗುದೀಪ್ ವಿರುದ್ಧ ಮತ್ತೊಬ್ಬ ಆರೋಪಿ ವಿನಯ್ ತನ್ನ ಮಾಫಿ ಸಾಕ್ಷಿ ಅರ್ಜಿಯನ್ನು ಹಿಂಪಡೆದಿದ್ದು, ಆ ಮೂಲಕ ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪ್ರದೋಷ್ ಬೆನ್ನಲ್ಲೇ ವಿನಯ್ ಸಹ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ಸದ್ಯ ಅದನ್ನು ಹಿಂಪಡೆಯಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.
ಆರೋಪಿ ವಿನಯ್ ಮಾಫಿ ಸಾಕ್ಷಿ ಅರ್ಜಿ ಹಿಂಪಡೆಯುತ್ತಿರುವುದು ಆರೋಪಿ ದರ್ಶನ್ಗೆ ಎದುರಾಗಿದ್ದ ಒಂದು ಸಂಕಷ್ಟ ದೂರವಾದಂತಿದೆ.






































