ಸೌಜನ್ಯ ಹೋರಾಟದ ಹೆಸರಲ್ಲಿ ದುಡ್ಡು ಮಾಡಿದವರ ತನಿಖೆ ನಡೆಯಬೇಕು: ಹಿರಿಯ ನ್ಯಾಯವಾದಿ ಹೇಳಿಕೆ

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿರಿಯ ನ್ಯಾಯವಾದಿ ಅಮೃತೇಶ್ ಮಾತನಾಡಿದ್ದು, ಈ ಪ್ರಕರಣದಲ್ಲಿ ಹಣ ಮಾಡಿದವರನ್ನು ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.

ಸೌಜನ್ಯ ಕೊಲೆ ಪ್ರಕರಣವನ್ನು ಧರ್ಮಸ್ಥಳ ದೇವಾಲಯದ ವಿರುದ್ಧ ಬಳಸಿ ಸತ್ಯಕ್ಕೆ ದೂರವಾದ ಆರೋಪ ಮಾಡಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿ ಇನ್ನೂ ಹಲವರ ಸಂಪತ್ತು ಹೆಚ್ಚಾಗಿದೆ. ಸೌಜನ್ಯ ಹೋರಾಟದ ಹೆಸರಿನಲ್ಲಿ ಹಲವರು ದುಡ್ಡು ಮಾಡಿದ್ದು, ಬುರುಡೆ ಗ್ಯಾಂಗ್‌ನ ವಿರುದ್ಧ ತನಿಖೆ ನಡೆಯಬೇಕು ಎಂದಿದ್ದಾರೆ.

ಬುರುಡೆ ಗ್ಯಾಂಗ್ ಹಿನ್ನೆಲೆಯ ಏನು, ಅವರು ಯಾಕೆ ಈ ವಿಷಯವನೇನು ಹೋರಾಟದಂತೆ ಬಿಂಬಿಸಿದ್ದಾರೆ ಎಂಬುದರ ಬಣ್ಣ ಬಯಲಾಗಬೇಕು. ಮೃತ ಸೌಜನ್ಯಾಳಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಎಸ್‌ಐಟಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಹಾಗೆಯೇ ಈ ಸಂದರ್ಭದಲ್ಲಿ ಸೌಜನ್ಯಾ ಕೊಲೆ ಪ್ರಕರಣ ನಡೆದ ಬಳಿಕ 2012ರಲ್ಲಿ ಸುದ್ದಿಗೋಷ್ಠಿಯಲ್ಲಿ ಸೌಜನ್ಯಾ ಪೋಷಕರು ಧರ್ಮಸ್ಥಳದ ಪರವಾಗಿ ಹೇಳಿಕೆ ನೀಡಿರುವ ವೀಡಿಯೋವನ್ನು ಅಮೃತೇಶ್‌ ಪ್ರಸಾರ ಮಾಡಿದರು. ಅನಂತರ ಯಾಕೆ ಧರ್ಮಸ್ಥಳದ ವಿರುದ್ಧ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.











































































error: Content is protected !!
Scroll to Top