ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆ, ಪದ್ಮ ನಗರ ಅಜೆಕಾರಿನಲ್ಲಿ ಅ. 15 ರಂದು ಬೆಳಗ್ಗೆ 9.30 ಕ್ಕೆ ‘ಕೆ. ಪಾಂಡುರಂಗ ರಾವ್ ವಾಚನಾಲಯ’ ಉದ್ಘಾಟನಾ ಸಮಾರಂಭ ನಡೆಯಲಿದೆ.
ಶ್ರೇಷ್ಠ ಗಣಿತ ಶಿಕ್ಷಕ ಶ್ರೀ ಕೆ ಪಿ ರಾವ್ರವರ ಆಶೀರ್ವಾದದೊಂದಿಗೆ ಹಾಗೂ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಡಾ. ಪದ್ಮನಾಭ ಕಾಮತ್ (ಪ್ರಾಧ್ಯಾಪಕರು ಮತ್ತು ಘಟಕ ಮುಖ್ಯಸ್ಥರು ಹೃದ್ರೋಗ ವಿಭಾಗ ಕೆಎಂಸಿ ಮಂಗಳೂರು) ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಯೋಗೀಶ್ ಹೆಗ್ಡೆ (ನಿರ್ದೇಶಕರು (CM & D) ನಿಟ್ಟೆ ವಿಶ್ವವಿದ್ಯಾಲಯ (Deemed to be)) ವಹಿಸಲಿದ್ದಾರೆ.
ಸಂಸ್ಥೆಯ ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರು, ಟ್ರಸ್ಟಿಗಳು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ.







































