ಮೂಡಬಿದಿರೆ: ಶಿರ್ತಾಡಿ ಪರಿಸರದಲ್ಲಿ ಕೆಲವು ದಿನಗಳ ಹಿಂದೆ ವ್ಯಕ್ತಿಗಳಿಬ್ಬರ ಮೇಲೆ ದಾಳಿ ಮಾಡಿದ್ದ ರಂಗ ಎಂಬ ಮಂಗ ನನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಶಿರ್ತಾಡಿ ಕಡೆಯ ಬಲರಾಮ ಭಟ್, ಅಳಿಯೂರು ಪಣಪಿಲ ಸಮೀಪದ ವಿನೀತ್ ಎಂಬವರ ಮೇಲೆ ಈ ಮಂಗ ದಾಳಿ ನಡೆಸಿತ್ತು. ಮಂಗಳೂರಿನಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆದಿದ್ದರು.
ಅರಣ್ಯಾಧಿಕಾರಿಗಳು, ಸ್ಥಳೀಯರು ಈ ಮಂಗವನ್ನು ಹಿಡಿಯಲು ಪ್ರಯತ್ನ ನಡೆಸಿದ್ದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಮಂಗನನ್ನು ಹಿಡಿಯಲು ಬೋನಿಗೆ ಸಿಕ್ಕಿಸಿದ್ದ ಆಹಾರವನ್ನು ಸಹ ಮಂಗ ತಿಂದಿದ್ದರೂ ಬೋನಿಗೆ ಮಾತ್ರ ಬಿದ್ದಿರಲಿಲ್ಲ. ಆದರೆ ಬೋನಿಗೆ ಹಾಕಿದ್ದ ದೋಸೆ ತಿನ್ನಲು ಬಂದ ಮಂಗ ಸೆರೆಯಾಗಿತ್ತು. ಸದ್ಯ ಮಂಗ ಅರಣ್ಯ ಇಲಾಖೆ ವಶದಲ್ಲಿದೆ.








































