ಕಾರ್ಕಳ: ಸಾರ್ವಜನಿಕವಾಗಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹ ಮಾಡುತ್ತಿರುವ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಸಾಗರ್‌ನನ್ನು ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಲ್ಲೊಟ್ಟೆ-ಪತ್ತೊಂಜಿಕಟ್ಟೆ ಸಾರ್ವಜನಿಕ ರಸ್ತೆ ಬದಿಯ ಗೋಕರ್ಣನಾಥ ಕೋ ಒಪರೇಟಿವ್ ಸೊಸೈಟಿ ಬಳಿಯ ಕಟ್ಟಡದಿಂದ ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಆರೋಪಿಯಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು 3,440 ರೂ., ಮಟ್ಕಾ ಸಂಖ್ಯೆ ಬರೆದ ಚೀಟಿ, ಪೆನ್ನು ಸ್ವಾಧೀಪಡಿಸಿಕೊಂಡಿದ್ದಾರೆ.





















