ಹೆಬ್ರಿ: ನಗರದ ಬಸ್ ನಿಲ್ದಾಣದ ಸಮೀಪ ಇರುವ ನಂದಿನಿ ಶಾಪ್ ಸಮೀಪ ನಿಲ್ಲಿಸಲಾಗಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ಕಳವಾಗಿರುವುದಾಗಿ ದೂರು ದಾಖಲಾಗಿದೆ.
ಈ ಸಂಬಂಧ ಮೋಟಾರ್ ಸೈಕಲ್ ಮಾಲೀಕ ಮಜ್ಜಿಗೆಬೈಲು ಮಣಿಕಲ್ಲು ಬಿಲ್ಲಾಡಿ ಗ್ರಾಮದ ಉದಯ ನಾಯ್ಕ ಅವರ ಪುತ್ರ ಶ್ರೀವತ್ಸ ನಾಯ್ಕ(19) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳವಾದ ಮೋಟಾರ್ ಸೈಕಲ್ ಮೌಲ್ಯ ರೂ. 15 ಸಾವಿರ ಎಂದು ಅಂದಾಜಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಹೆಬ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





















