ಕಾರ್ಕಳ: ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮತ್ತು ರೆಡ್‌ರಿಬ್ಬನ್ ವತಿಯಿಂದ ಅಂತರಾಷ್ಟ್ರೀಯ ಏಡ್ಸ್ ದಿನಾಚರಣೆಯ ಅಂಗವಾಗಿ ಏಡ್ಸ್ ಜಾಗೃತಿಯ ಕಾರ್ಯಕ್ರಮ ಜರುಗಿತು.
ಕಮುಖ್ಯ ಅತಿಥಿಯಾಗಿ ಬಿಂದಿಯ ಶೆಟ್ಟಿ (ಆಪ್ತಸಮಾಲೋಚಕರು, ಸರಕಾರಿ ಆಸ್ಪತ್ರೆ ಕಾರ್ಕಳ) ಅವರು ವಿದ್ಯಾರ್ಥಿನಿಯರಿಗೆ ಏಡ್ಸ್ ಜಾಗೃತಿಯ ಕುರಿತು ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಪ್ರೊ .ಗೀತಾ ಜಿ. ವಹಿಸಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಗ್ಯ ಸ್ವಾಗತಿಸಿದರು. ಮುನೀರಾ ನಿರೂಪಿಸಿದರು. ನಿಶಾ ವಂದಿಸಿದರು.







































