ನವದೆಹಲಿ: ಶ್ಯಾಂಪೂ, ಸೋಪು, ಟೂತ್‌ಪೇಸ್ಟ್‌ಗಳಿಗೂ ಇನ್ನು ಮುಂದೆ ವೆಜ್ ಅಥವಾ ನಾನ್‌ವೆಜ್ ಗುರುತು ಕಡ್ಡಾಯಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಸೌಂದರ್ಯವರ್ಧಕಗಳು, ಸೋಪು, ಶ್ಯಾಂಪೂ ಇತ್ಯಾದಿಗಳನ್ನು ಎಷ್ಟೇ ಸುಂದರವಾಗಿ ಪ್ಯಾಕ್ ಮಾಡಿ. ಆದರೆ ಅದನ್ನು ವೆಜ್‌ನಿಂದ ತಯಾರಿಸಲಾಗಿದೆಯೋ ಅಥವಾ ನಾನ್‌ವೆಜ್‌ನಿಂದ ತಯಾರಿಸಲಾಗಿದೆಯೋ ಎನ್ನುವ ಮಾಹಿತಿಯನ್ನು ಬಳಕೆದಾರರಿಗೆ ತಲುಪಿಸುವುದು ಮುಖ್ಯ ಎಂದು ಸರ್ಕಾರ ತಿಳಿಸಿದೆ. ಈ ನಿಯಮಗಳು ತಕ್ಷಣದಿಂದಲೇ ಜಾರಿಯಾಗಲಿವೆ ಎಂದು ತಿಳಿದು ಬಂದಿವೆ.
ಸೌಂದರ್ಯವರ್ಧಕಗಳಲ್ಲಿ ಮಾಂಸದಂತಹ ಕೆಲವು ಪದಾರ್ಥಗಳನ್ನು ಬಳಸಲಾಗುತ್ತದೆ ಎನ್ನುವ ಮಾತಿನಿಂದಾಗಿ ಹಲವು ಮಂದಿ ಸಸ್ಯಹಾರಿಗಳು ಅವುಗಳನ್ನು ಮುಟ್ಟುವುದಿಲ್ಲ. ಕೆಲವರು ಅರಿವಿಲ್ಲದೇ ಬಳಕೆ ಮಾಡುತ್ತಾರೆ. ಯಾವುದೇ ಉತ್ಪನ್ನ ಖರೀದಿಗೆ ಮುನ್ನ ಅದರಲ್ಲಿ ಏನೆಲ್ಲಾ ಇದೆ, ಅದು ಸಸ್ಯಹಾರಿಯೋ ಇಲ್ಲವೋ ಎಂದು ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. ಹೀಗಾಗಿ ಪ್ರತೀ ಉತ್ಪನ್ನದ ಪ್ಯಾಕೆಟ್‌ನ ಮೇಲ್ಬಾಗದಲ್ಲಿ ಹಸಿರು ಅಥವಾ ಕೆಂಪು ಚಿಹ್ನೆ ಇರುವುದು ಕಡ್ಡಾಯವಾಗಿದೆ.





















