ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ರವಿಶಾಸ್ತ್ರಿ ಭೇಟಿ

ಕಾರ್ಕಳ : ಕಾರ್ಕಳ ತಾಲೂಕು ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸೆ. 24ರಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌, ಖ್ಯಾತ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಭೇಟಿ ನೀಡಿ ದೇವರ ದರುಶನ ಪಡೆದರು. ಈ ವೇಳೆ ವಿಷ್ಣುಮೂರ್ತಿ ದೇವರಿಗೆ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಲ್ಲಿಸಿದರು. ರವಿಶಾಸ್ತ್ರಿ ಅವರ ಮೂಲ ಸ್ಥಾನ ಕರ್ವಾಲು ಆಗಿದ್ದು ಕಳೆದ 17 ವರ್ಷಗಳಿಂದ ಪ್ರತಿವರ್ಷ ಕರ್ವಾಲು ಕ್ಷೇತ್ರಕ್ಕೆ ಬಂದು ದೇವರ ಅನುಗ್ರಹ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪಟ್ಟಾಭಿ ರಾವ್‌, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಉಪಾಧ್ಯಕ್ಷ ಸುದಾಕರ್‌ ಹೆಗ್ಡೆ , ಸಂತೋಷ್ ಶಾಸ್ತ್ರಿ , ಕವಿತಾ ಶಾಸ್ತ್ರಿ , ಸಂದೀಪ್‌ ಶೆಟ್ಟಿ ಯರ್ಲಪಾಡಿ, ದೇವಸ್ಥಾನದ ತಂತ್ರಿಗಳಾದ ನರಸಿಂಹ ತಂತ್ರಿ, ಅರ್ಚಕರಾದ ವರದರಾಜ ತಂತ್ರಿ ಬೈಲೂರು, ಅಶೋಕ್‌ ಕಾರಂತ, ಮೋಹನ್ ದಾಸ್‌ ಹೆಗ್ಡೆ ಜಾರ್ಕಳ, ಉದಯ ಕುಮಾರ್‌ ಹೆಗ್ಡೆ ಯರ್ಲಪಾಡಿ, ಕಮಲಾಕ್ಷ ನಾಯಕ್‌, ಜಾಹ್ನವಿ ಸಿ ರಾವ್‌, ಸತೀಶ್‌ ರಾವ್‌ ಕರ್ವಾಲು, ಹರಿಶ್ಚಂದ್ರ ರಾವ್‌, ಸತೀಶ್‌ ಶೆಟ್ಟಿ ಯರ್ಲಪಾಡಿ ಇನ್ನಿತರು ಉಪಸ್ಥಿತರಿದ್ದರು.









































error: Content is protected !!
Scroll to Top