ಕಾರ್ಕಳ ಪುರಸಭೆಯ ವತಿಯಿಂದ ಪೌರಕಾರ್ಮಿಕರ ದಿನಾಚರಣೆ

ಕಾರ್ಕಳ: ಪುರಸಭೆ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆಯನ್ನು ಕಾರ್ಕಳದ ಪೆರ್ವಾಜೆ ಬಿಲ್ಲವ ಸಮಾಜ ಭವನದಲ್ಲಿ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಕುಂದಾಪುರ ಬಸ್ರುರು ಶ್ರೀ ಶಾರದಾ ಕಾಲೇಜು ಪ್ರಾಂಶುಪಾಲ ಡಾ. ದಯಾನಂದ ಬಾಯರ್, ನಿವೃತ್ತ ಮುಖ್ಯಾಧಿಕಾರಿ, ಕೃಷಿಕ ಗೋಪಾಲ್ ಶೆಟ್ಟಿ ಪತ್ತೊಂಜಿಕಟ್ಟೆ ಪೌರ ಕಾರ್ಮಿಕರಿಗೆ ಶುಭ ಹಾರೈಸಿ ಪೌರ ಕಾರ್ಮಿಕರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಕಳ ಪುರಸಭೆ ಮುಖ್ಯಧಿಕಾರಿ ಲೀನಾ ಬ್ರಿಟ್ಟೋ
ಪುರಸಭೆ ಹಿರಿಯ ಅರೋಗ್ಯಧಿಕಾರಿ ಲೈಲಾ ತೋಮಸ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬಾಬು ಕೆ., ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ದೇವಾಡಿಗ, ಬಿಲ್ಲವ ಸಮಾಜದ ನಿಕಟ ಪೂರ್ವ ಅಧ್ಯಕ್ಷ ಪ್ರಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿಗೆ ನಿವೃತ್ತಗೊಂಡ ಪೌರಕಾರ್ಮಿಕ ರವಿ ಅವರಿಗೆ ಪುರಸಭೆ, ಪೌರ ಕಾರ್ಮಿಕರು ಹಾಗೂ ಪುರಸಭೆ ವಾಹನ ಚಾಲಕರ ವತಿಯಿಂದ ಸನ್ಮಾನ, ನಗದು ನೀಡಿ ಗೌರವಿಸಲಾಯಿತು. ಪುರಸಭೆ ವತಿಯಿಂದ ಪುರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.









































error: Content is protected !!
Scroll to Top