ಸಾರಿ ಕುಚ್ಚು, ಬಾಕ್ಸ್ ಫೋಲ್ಡಿಂಗ್ ತರಬೇತಿ ಶಿಬಿರ

ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಟಿ.ಎಮ್.ಜಿ. ಸುನಿಧಿ ಫೌಂಡೇಷನ್, ಮಣಿಪಾಲ, ಗ್ರಾಮ ಪಂಚಾಯತ್ ಬೈಲೂರು ಹಾಗೂ ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಾದರಿ ಒಕ್ಕೂಟ(ರಿ) ಬೈಲೂರು ಇವರ ಸಹಯೋಗದಲ್ಲಿ 10 ದಿನಗಳ ಸಾರಿ ಕುಚ್ಚು ಮತ್ತು ಸಾರಿ ಬಾಕ್ಸ್ ಫೋಲ್ಡಿಂಗ್ ತರಬೇತಿ ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ತರಬೇತಿಯನ್ನು ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಅವರು ಶುಭ ಹಾರೈಸಿದರು.

ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಅವರು ಭಾರತೀಯ ವಿಕಾಸ ಟ್ರಸ್ಟ್ ಹಾಗೂ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಮ್ಯಾ ಎ. ಸಿ., ವಿಶಾಲ, ಹರ್ಷಿತಾ ಮತ್ತು ಶುಭ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 30 ಸಂಜೀವಿನಿ ಮಹಿಳೆಯರು ಭಾಗವಸಿದ್ದರು.

ರವಿಕಲ, ಸಂಜೀವಿನಿ ಎಂ.ಬಿ.ಕೆ.ಸ್ವಾಗತಿಸಿದರು, ಸೌಮ್ಯ ಎಸ್ ನಿರೂಪಿಸಿದರು. ಸುಮಂಗಲ ವಂದಿಸಿದರು.















































































error: Content is protected !!
Scroll to Top