ಕಾರ್ಕಳ ಥೀಮ್ ಪಾರ್ಕ್‌ ಕುರಿತ ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಸಂಬಂಧಿಸಿದಂತೆ ಸೆ. 24 ರಂದು ಜನಾಗ್ರಹ ಸಭೆ ನಡೆಯಲಿದ್ದು, ಅದರ ಪೂರ್ವಭಾವಿ ಸಭೆಯು ಊರ ಪ್ರಮುಖರ ಸಮ್ಮುಖದಲ್ಲಿ ನಡೆಯಿತು.

ಯರ್ಲಪ್ಪಾಡಿ ಬೈಲೂರು ಪರಶುರಾಮ ಥೀಮ್ ಪಾರ್ಕ್ ಜನಾಗ್ರಹ ಸಮಿತಿಯ ವತಿಯಿಂದ ಜನಾಗ್ರಹ ‌ಸಭೆ ನಡೆಯಲಿದೆ. ಸೆ.24 ರ ಸಂಜೆ 5 ಗಂಟೆಗೆ ಬೈಲೂರು ಮಾರಿ ಗುಡಿ ಸಭಾಂಗಣದಲ್ಲಿ ಸಭೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕೋರಲಾಗಿದೆ.

ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರೆಸುವುದು ಮತ್ತು ಪಾರ್ಕ್‌ಗೆ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಜನಾಗ್ರಹ ಸಭೆ ನಡೆಯಲಿದೆ. ಕಾರ್ಕಳದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸುವಂತೆ ಆಯೋಜಕರು ತಿಳಿಸಿದ್ದಾರೆ.















































error: Content is protected !!
Scroll to Top