ಕೃಷಿ ಪಂಪ್ ಸೆಟ್‌ಗಳಿಗೆ ‌7 ಗಂಟೆ ವಿದ್ಯುತ್: ಕೆ.ಜೆ. ಜಾರ್ಜ್

ಬೆಂಗಳೂರು: ರಾಜ್ಯದಲ್ಲಿ ಈ ವರೆಗೆ ಕೃಷಿ ಪಂಪ್ ಸೆಟ್‌ಗೆ ಪೂರೈಕೆ ಮಾಡಲಾಗುತ್ತಿದ್ದ ವಿದ್ಯುತ್ ಅನ್ನು 6 ರಿಂದ 7 ಗಂಟೆಗೆ ಏರಿಕೆ ಮಾಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್‌ ಪೂರೈಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಸದ್ಯ ನಿಗದಿಗಿಂತ ಹೆಚ್ಚಿನ ವಿದ್ಯುತ್‌ ಬೇಡಿಕೆ, ವಿದ್ಯುತ್‌ ಉತ್ಪಾದನೆಯಿಲ್ಲದ ವ್ಯತ್ಯಯದಿಂದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ 1 ಗಂಟೆ ಕಡಿತಗೊಳಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿ 1 ಗಂಟೆ ವಿದ್ಯುತ್‌ ಪೂರೈಕೆ ಕ್ರಮವನ್ನು ಮುಂದುವರಿಸಲಾಗುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ಹೊರ ರಾಜ್ಯಗಳಿಂದ ಈ ಹಿಂದೆ ಪಡೆದಿರುವ ವಿದ್ಯುತ್‌ನ್ನು ವಾಪಸ್‌ ಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಈ ತಿಂಗಳ ಅಂತ್ಯಕ್ಕೆ ಅದು ಪೂರ್ಣಗೊಳ್ಳಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಜಲವಿದ್ಯುತ್‌ ಉತ್ಪಾದನೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ವಿದ್ಯುತ್ ಪೂರೈಕೆಗಾಗಿ ಹಣ ನೀಡಿ ವಿದ್ಯುತ್‌ ಖರೀದಿಸುವುದಾಗಿ ಹೇಳಿದ್ದಾರೆ.











































error: Content is protected !!
Scroll to Top