‘ಸುರಕ್ಷಿತ ಮಾತೃತ್ವ ಆಶ್ವಾಸನ-ಸುಮನ್ ರೋಡ್ ಮ್ಯಾಪ್ 2030’ ಬಿಡುಗಡೆಗೊಳಿಸಿದ ಸಚಿವ ಯು.ಟಿ. ಖಾದರ್

ಬೆಂಗಳೂರು: ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣ ಪ್ರಮಾಣ (ಎಂಎಂಆರ್) ಶೂನ್ಯಕ್ಕೆ ತರುವ ಮಹತ್ವದ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿ ‘ಸುರಕ್ಷಿತ ಮಾತೃತ್ವ ಆಶ್ವಾಸನ-ಸುಮನ್ ರೋಡ್ ಮ್ಯಾಪ್ 2030’ ಅನ್ನು ಸಚಿವ ಯು.ಟಿ. ಖಾದರ್ ಅವರು ಬಿಡುಗಡೆ ಮಾಡಿದ್ದಾರೆ.

ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ‌ಮಾತನಾಡಿದ ಅವರು 2022-24ರ ಎಸ್‍ಆರ್‌ಎಸ್ ಅಂದಾಜಿನಂತೆ ಕರ್ನಾಟಕದ ತಾಯಂದಿರ ಮರಣ ಪ್ರಮಾಣ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ 73ರಷ್ಟಿದೆ. ಇದನ್ನು 70ಕ್ಕಿಂತ ಕಡಿಮೆಗೊಳಿಸುವುದು ರಾಜ್ಯದ ತಕ್ಷಣದ ಗುರಿ. ದೀರ್ಘಾವಧಿಯಲ್ಲಿ ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಸೊನ್ನೆಗೆ ಇಳಿಸುವ ಉದ್ದೇಶ ನಮ್ಮದು ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗರ್ಭಧಾರಣೆಗೆ ಮುನ್ನದ ಆರೈಕೆ, ರಕ್ತಹೀನತೆ ಮತ್ತು ಪೌಷ್ಟಿಕಾಂಶದ ಕೊರತೆಗಳ ನಿರ್ವಹಣೆ, ಗುಣಮಟ್ಟದ ಗರ್ಭಪೂರ್ವ ತಪಾಸಣೆ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಗುರುತಿಸುವಿಕೆ, ಸೂಕ್ತ ರೆಫರಲ್ ವ್ಯವಸ್ಥೆ ಕುರಿತು, ಸುರಕ್ಷಿತ ಹೆರಿಗೆ, ಪ್ರಸವೋತ್ತರ ರಕ್ತಸ್ರಾವ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಸೆಪ್ಟಿಸ್ ಸೇರಿದಂತೆ ಪ್ರಸೂತಿ ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸುವ ಸಿದ್ಧತೆ, ತಾಯಿಯ ಮರಣದ ಮೂಲ ಕಾರಣಗಳನ್ನು ಗುರುತಿಸಿ, ಸರಿಪಡಿಸುವ ಕ್ರಮ ಕೈಗೊಂಡು, ಅನುಸರಣೆ ಮೂಲಕ ಆರೋಗ್ಯ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆ ತರುವ ನಿಟ್ಟಿನಲ್ಲಿ ಮೆಟರ್ನಲ್ ಡೆತ್ ಸರ್ವೈಲೆನ್ಸ್ ಅಂಡ್ ರೆಸ್ಪಾನ್ಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಝೀರೋ ಮೆಟರ್ನಲ್ ಡೆತ್ ಗ್ರಾಮ್ ಪಂಚಾಯತ್ ಅಭಿಯಾನದ ಮೂಲಕ ಗರ್ಭಿಣಿಯರು, ಹೆಚ್ಚಿನ ಅಪಾಯದ ಗರ್ಭಿಣಿಯರನ್ನು ಗುರುತಿಸುವುದು, ಆರೋಗ್ಯ ಸೇವೆಗಳಿಗೆ ಸಂಪರ್ಕ ಕಲ್ಪಿಸುವುದು, ಹೆರಿಗೆ ಪೂರ್ವ ಸಿದ್ಧತೆ, ತುರ್ತು ಸಾರಿಗೆ ಹಾಗೂ ಪ್ರಸವೋತ್ತರ ಆರೈಕೆ ಮೊದಲಾದವುಗಳ ಬಗ್ಗೆ ಚರ್ಚೆ ನಡೆಸಲಾಯಿತು.































error: Content is protected !!
Scroll to Top