ಆಯುಷ್ಮಾನ್ ಭಾರತ್ ಯೋಜನೆಗೆ 8 ವರ್ಷ: ಸಂತಸ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಭಾರತದ ಮಧ್ಯಮ ಮತ್ತು ಬಡ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೈಗೆಟಕುವ ದರದಲ್ಲಿ ಸೇವೆ ನೀಡಲು ಕೇಂದ್ರ ಸರ್ಕಾರ ಜಾರಿಗೆ ‌ತಂದ ಆಯುಷ್ಮಾನ್ ಭಾರತ್ ಎಂಟು ವರ್ಷಗಳನ್ನು ಪೂರೈಸಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಆಯುಷ್ಮಾನ್ ಭಾರತ್ ಕೋಟ್ಯಾಂತರ ಜನರ ಬದುಕಿನಲ್ಲಿ ಭರವಸೆಯ ಬೆಳಕಾಗಿದೆ. ದೇಶದ 60 ಕೋಟಿಗೂ ಅಧಿಕ ಜನರಿಗೆ ವಾರ್ಷಿಕ 5 ಲಕ್ಷ ರೂ.ಗಳ ಉಚಿತ ಆರೋಗ್ಯ ಕವರೇಜ್ ಒದಗಿಸುವ ಮೂಲಕ ಬಡವರ ಜೇಬಿನ ಹಣ ಉಳಿತಾಯವಾಗುವಂತೆ ಮಾಡಿದೆ’ ಎಂದು ಹೇಳಿದ್ದಾರೆ.

ಈ ಯೋಜನೆಯಲ್ಲಿ ಇದುವರೆಗೆ ಬರೋಬ್ಬರಿ 48.5 ಕೋಟಿಗೂ ಹೆಚ್ಚು ಡಿಜಿಟಲ್ ಹೆಲ್ತ್ ಕಾರ್ಡ್‌ಗಳನ್ನು ಮಾಡಲಾಗಿದೆ. ದೇಶಾದ್ಯಂತ ಇರುವ 39,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಮೂಲಕ ಸುಮಾರು 13 ಕೋಟಿಗಿಂತಲೂ ಹೆಚ್ಚು ಜನರು 2 ಲಕ್ಷ ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಉಚಿತ ಚಿಕಿತ್ಸೆ ಪಡೆದಿದ್ದಾರೆ. ದೊಡ್ಡ ಆಸ್ಪತ್ರೆಗಳು ಮಾತ್ರವಲ್ಲದೆ, ಹಳ್ಳಿ ಹಳ್ಳಿಗಳ ತಳಮಟ್ಟದಲ್ಲಿ ಜನರಿಗೆ ಹತ್ತಿರವಾಗಿ ಚಿಕಿತ್ಸೆ ನೀಡಲು ಆರಂಭಿಸಲಾಗಿರುವ ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳಿಗೆ ಸಾರ್ವಜನಿಕರು ಬರೋಬ್ಬರಿ 500 ಕೋಟಿಗೂ ಅಧಿಕ ಬಾರಿ ಭೇಟಿ ನೀಡಿ ಆರೋಗ್ಯತಪಾಸಣೆ ಮಾಡಿಸಿಕೊಂಡಿದ್ದಾರೆಂದು ವರದಿಗಳು ಹೇಳುತ್ತವೆ. ಇದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ಭದ್ರತೆ ಕಲ್ಪಿಸುವ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೃಢ ಸಂಕಲ್ಪಕ್ಕೆ ‌ಸಾಕ್ಷಿ.











































error: Content is protected !!
Scroll to Top