ವಿಶ್ವ ದಾಖಲೆಗಾಗಿ ನಿರ್ಮಾಣವಾಗಲಿರುವ ಸಿನೆಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ದಾಖಲೆಯ ಪ್ರಯತ್ನವಾಗಿ ಸಿದ್ಧವಾಗುತ್ತಿರುವ ಸಿನೆಮಾ ಒಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಚಲನಚಿತ್ರದ ಸಂಪೂರ್ಣ ಪ್ರಕ್ರಿಯೆಗಳು 48 ಗಂಟೆಗಳಲ್ಲಿ ಮುಗಿಯಲಿದೆ. ಇದರ ನಿರ್ದೇಶನವನ್ನು ರಾಜೇಶ್ ಗೌಡ ಅವರು ಮಾಡಲಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಯಲಿರುವ ಈ ಸಿನೆಮಾದಲ್ಲಿ ಸಿದ್ದರಾಮಯ್ಯ ಅವರು ಬಣ್ಣ ಹಚ್ಚುತ್ತಿರುವುದಾಗಿದೆ.

ನಿರ್ದೇಶಕರು ಹೇಳಿದ ಕಥೆ ಸಹ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆಯಾಗಿದ್ದು, ಸಿನಿಮಾದಲ್ಲಿ ಪ್ರಮುಖವಾಗಿ ಬರುವ ಮುಖ್ಯಮಂತ್ರಿಯ ಪಾತ್ರದಲ್ಲಿಯೇ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದರಲ್ಲೂ, ಈ ಸಿನಿಮಾದ ಚಿತ್ರಕಥೆ ಬರೆಯುವುದರಿಂದ ಹಿಡಿದು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವವರೆಗಿನ ಎಲ್ಲಾ ಹಂತಗಳನ್ನು ಕೇವಲ 48 ಗಂಟೆಗಳಲ್ಲಿ ಮುಗಿಸಿ ವಿಶ್ವ ದಾಖಲೆ ಬರೆಯುವ ಹುಮ್ಮಸ್ಸು ಚಿತ್ರ ತಂಡದ್ದಾಗಿದೆ.











































error: Content is protected !!
Scroll to Top