ಕೋಳಿ ಅಂಕಕ್ಕೆ ದಾಳಿ: ಐದು ಮಂದಿ ಪೊಲೀಸ್ ವಶಕ್ಕೆ

ಕಾರ್ಕಳ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಇರ್ವತ್ತೂರಿನ ಕೆಂಪುಗುಡ್ಡೆ ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಮಿಯ್ಯಾರು ಗ್ರಾಮದ ಸುನಿಲ್ ಡಿಸೋಜ(39), ಹರೀಶ್ ಭಂಡಾರಿ (54), ರೆಂಜಾಳ ಗ್ರಾಮದ ಶ್ರೀನಿವಾಸ(38), ಮಂಗಳೂರು ಮಾರ್ಪಾಡಿ ಗ್ರಾಮದ ರಾಜೇಶ(31), ಅರುಣ ಇರ್ವತ್ತೂರು ಎಂದು ಗುರುತಿಸಲಾಗಿದೆ.

ಸ್ಥಳದಿಂದ 1 ಹುಂಜ, 1600ರೂ., 2 ಬಾಳು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















































































error: Content is protected !!
Scroll to Top