ಎಜೆ ಇಂಜಿನಿಯರಿಂಗ್‌ ತಂತ್ರಜ್ಞಾನ ಸಂಸ್ಥೆಯ IQAC ಸದಸ್ಯರಾಗಿ ಡಾ. ಮಿಥುನ್

ಮಂಗಳೂರು : ಪ್ರತಿಷ್ಠಿತ ಎ. ಜೆ. ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಶೈಕ್ಷಣಿಕ ಕ್ಷೇತ್ರದ ಸದಸ್ಯರಾಗಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿರುವ ಡಾ. ಮಿಥುನ್ ಯು. ಆಯ್ಕೆಯಾಗಿರುತ್ತಾರೆ. ಇವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕನಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಸ್ತುತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2018ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ವಿಶಾಲಕ್ಷಿ ಬಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಿಥುನ್ ಡಾಕ್ಟರೇಟ್ ಪದವಿ ಸ್ವೀಕರಿಸಿರುವ ಇವರು ಇಂಡಿಯನ್ ಕೌನ್ಸಿಲ್ ಆಫ್ ಕೆಮಿಸ್ಟ್‌ (ಐ.ಸಿ.ಸಿ.) ಹಾಗೂ ದ ಸೊಸೈಟಿ ಫಾರ್ ಪಾಲಿಮರ್ ಸೈನ್ಸ್ ಇಂಡಿಯಾ (ಎಸ್.ಪಿ.ಎಸ್) ಇದರ ಸದಸ್ಯರಾಗಿರುತ್ತಾರೆ. ಬ್ರಹ್ಮಾವರದ ಮುತ್ತ ಸುವರ್ಣ ಮತ್ತು ನರ್ಸಿ ಕೋಟ್ಯಾನ್ ದಂಪತಿ ಪುತ್ರ. ಅಜೆಕಾರ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅವರು ಮಿಥುನ್‌ ಅವರನ್ನು ಅಭಿನಂದಿಸಿರುತ್ತಾರೆ.





































error: Content is protected !!
Scroll to Top