ಕಾಕ್ರೋಚ್‌ ಜನತಾ ಪಾರ್ಟಿ ಎಕ್ಸ್‌ ಖಾತೆಗೆ ಭಾರತದಲ್ಲಿ ನಿರ್ಬಂಧ !

ದೆಹಲಿ : ದೇಶಾದ್ಯಂತ ಸದ್ದು ಮಾಡುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ(CJP) ಎಕ್ಸ್‌ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
CJP_2029 ಯೂಸರ್‌ನೇಮ್‌ ಹೊಂದಿರುವ ಈ ಖಾತೆಗೆ ಹೋದಾಗ ʻAccount Withheldʼ ಮಾಡಲಾಗಿದೆ ಎಂದು ತೋರಿಸಲಾಗುತ್ತದೆ. “@CJP_2029 has been withheld in IN in response to a legal demand” ಎಂದು ಕಾಣಿಸುತ್ತದೆ.

ಕಾಕ್ರೋಚ್‌ ಜನತಾ ಪಾರ್ಟಿ
ಹಿರಿಯ ವಕೀಲರ ಹುದ್ದೆಯ ಪದನಾಮಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದಾಗ ಉದ್ಯೋಗ ಸಿಗದ ಕೆಲವು ಯುವಕರು ವ್ಯವಸ್ಥೆಯ ವಿರುದ್ಧ ತಿರುಗಿಬೀಳುತ್ತಾರೆ. ಅವರು ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ ಕಾರ್ಯಕರ್ತರ ರೂಪದಲ್ಲಿ ಜಿರಳೆಗಳಂತೆ ಎಲ್ಲರ ಮೇಲೆ ದಾಳಿ ಮಾಡುತ್ತಾರೆ ಎಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಟೀಕಿಸಿತ್ತು.

ನ್ಯಾ. ಸೂರ್ಯಕಾಂತ್ ಹೇಳಿಕೆ ಬೆನ್ನಲ್ಲೇ ಕಾಕ್ರೊಚ್ ಹೆಸರಿನಲ್ಲಿ ರಾಜಕೀಯ ಪಕ್ಷದ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಅಕೌಂಟ್ ತೆರೆಯಲಾಗಿತ್ತು. ಅಭಿಜೀತ್ ದಿಪ್ಕೆ ʼಕಾಕ್ರೋಚ್‌ ಜನತಾ ಪಾರ್ಟಿʼ ಯನ್ನುಎಕ್ಸ್‌ನಲ್ಲಿ ಸ್ಥಾಪಿಸಿ ಪ್ರಚಾರ ಮಾಡುತ್ತಿದ್ದಾರೆ. ಪ್ರಸುತ್ತ ರಾಜಕೀಯ ವ್ಯವಸ್ಥೆ ಪ್ರಶ್ನೆ ಮಾಡ್ತಿರುವ ದಿಪ್ಕೆ ಈ ವಿನೂತನ ಪ್ರಯತ್ನಕ್ಕೆ ದೇಶದ ಜೆನ್ ಜಿ ಗಳಿಂದ ಬೆಂಬಲ ವ್ಯಕ್ತವಾಗಿತ್ತಿದೆ.

ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿರುವ ಇವರು, ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಈ ಹಿಂದೆ (2020 ರಿಂದ 2023 ರವರೆಗೆ) ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ರಚಾರ ತಂಡದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು.

































































































error: Content is protected !!
Scroll to Top