ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ

ಬೆಂಗಳೂರು : 2026ರ ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮೇ 21ರಂದು ಪ್ರಕಟಿಸಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿದಂತೆ ಒಟ್ಟು 80,535 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು. ಈ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದಿದ್ದ 43,311 ಬಾಲಕರಲ್ಲಿ 19367 ವಿದ್ಯಾರ್ಥಿಗಳು ಪಾಸಾಗಿದ್ದರೆ, 37,224 ಬಾಲಕಿಯರ ಪೈಕಿ 17,397 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಉನ್ನತ ಶ್ರೇಣಿ: 85%ಕ್ಕಿಂತ ಹೆಚ್ಚು ಅಂಕ ಪಡೆದವರು 62 ವಿದ್ಯಾರ್ಥಿಗಳು,
ಪ್ರಥಮ ದರ್ಜೆ: 60%-85% ಅಂಕ‌ ಪಡೆದ ವಿದ್ಯಾರ್ಥಿಗಳು 8086
ದ್ವಿತೀಯ ದರ್ಜೆ : 50%-60% ಅಂಕ ಪಡೆದ ವಿದ್ಯಾರ್ಥಿಗಳು 16,940,
ಶೇಕಡಾ 50% ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು 11,676.
ಹೊಸಬರು : 80,535 ವಿದ್ಯಾರ್ಥಿಗಳ‌ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣ
ಪುನರಾವರ್ತಿತ : 34,419 ವಿದ್ಯಾರ್ಥಿಗಳ ಪೈಕಿ 10,279 ವಿದ್ಯಾರ್ಥಿಗಳು ಉತ್ತೀರ್ಣ
ಖಾಸಗಿ : 5456 ವಿದ್ಯಾರ್ಥಿಗಳ ಪೈಕಿ 1562 ವಿದ್ಯಾರ್ಥಿಗಳು ಉತ್ತೀರ್ಣ

































































































error: Content is protected !!
Scroll to Top