Author name: Newskarkala Desk

ಡಿ. 9-11 : ಶಿವಪುರದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ

ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಫ್ರೆಂಡ್ಸ್‌ ಶಿವಪುರ ಸಹಯೋಗ – 54 ತಂಡಗಳು ಭಾಗಿ ಹೆಬ್ರಿ : ಪ್ರೌಢಶಾಲಾ ವಿಭಾಗದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಡಿ. 9ರಿಂದ 11ರವರೆಗೆ ಶಿವಪುರ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ ಮತ್ತು ಫ್ರೆಂಡ್ಸ್‌ ಶಿವಪುರ ಸಹಯೋಗದಲ್ಲಿ ಅತ್ಯಂತ ಅದ್ಧೂರಿಯಾಗಿ ಮ್ಯಾಟ್‌ ಮಾದರಿಯ ಪಂದ್ಯಾಟ ಜರಗಲಿದೆ. ಈ ಹಿನ್ನೆಲೆಯಲ್ಲಿ ನ. 26 ಸಂಜೆ ಶಿವಪುರ ಶಂಕರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಈ ವೇಳೆ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ […]

ಡಿ. 9-11 : ಶಿವಪುರದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ Read More »

ಪೆರ್ವಾಜೆ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

ಸದೃಢ ದೇಹದೊಂದಿಗೆ ಸದೃಢ ಮನಸ್ಸನ್ನು ಹೊಂದಲು ಕ್ರೀಡೆ ಸಹಕಾರಿ – ವಿಪುಲ್‌ ತೇಜ್ ಕಾರ್ಕಳ : ಕ್ರೀಡೆಯು ವ್ಯಾಯಾಮದೊಂದಿಗೆ ಜೀವನೋತ್ಸಾಹವನ್ನು ನೀಡುತ್ತದೆ. ಸದೃಢ ದೇಹದೊಂದಿಗೆ ಸದೃಢ ಮನಸ್ಸನ್ನು ಹೊಂದಲು ಕ್ರೀಡೆ ಸಹಕಾರಿ ಎಂದು ನ್ಯಾಯವಾದಿ ವಿಪುಲ್‌ ತೇಜ್‌ ಹೇಳಿದರು. ಅವರು ಪೆರ್ವಾಜೆಯ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ರಜತ ಮಹೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ನ. 26 ರಂದು ನಡೆದ ಕ್ರೀಡೋತ್ಸವದಲ್ಲಿ ಮಾತನಾಡಿ, ಶಾಲೆಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪೆರ್ವಾಜೆ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ Read More »

ಕ್ರಿಯೇಟಿವ್‌ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಕಾರ್ಕಳ : ಸಂವಿಧಾನದ ರಕ್ಷಣೆ ಮಾಡಿದಾಗ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಜೀವನ ನಡೆಸಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಕ್ರಿಯೇಟಿವ್‌ ಕಾಲೇಜಿನ ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌ ಅಭಿಪ್ರಾಯಪಟ್ಟರು. ಅವರು ನ .26 ರಂದು ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂವಿಧಾನವು ವಿಶ್ವದಲ್ಲೇ ಮಾದರಿ ಸಂವಿಧಾನವಾಗಿದೆ. ಇದು ಡಾ. ಬಿ. ಆರ್‌. ಅಂಬೆಡ್ಕರ್‌ ಅವರು ದೇಶಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತಗೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ದೇಶದ ಸಮಗ್ರತೆಯನ್ನು ಗೌರವಿಸೋಣ

ಕ್ರಿಯೇಟಿವ್‌ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ Read More »

ನಿಟ್ಟೆ : ಜಪಾನ್‌ನ ಝೆನ್ಕೆನ್ ಸಂಸ್ಥೆಯೊಂದಿಗೆ ಒಪ್ಪಂದ

ಕಾರ್ಕಳ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಪಾನ್‌ನ ಝೆನ್ಕೆನ್ ಸಂಸ್ಥೆಯ ನಡುವಿನ ಶೈಕ್ಷಣಿಕ ಒಪ್ಪಂದ ಕಾರ್ಯಕ್ರಮ ನ. 24 ರಂದು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು. ಪ್ರಾಂಶುಪಾಲ ಡಾ| ನಿರಂಜನ್ ಎನ್. ಚಿಪ್ಳೂಣ್ಕರ್ ಹಾಗೂ ಝೆನ್ಕೆನ್ ಸಂಸ್ಥೆಯ ಜಪಾನ್ ಕೆರಿಯರ್ ಕನ್ಸಲ್ಟೆಂಟ್ ತೆರುಅಕಿ ಕಶಿವಬರ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭ ತಾಂತ್ರಿಕ ಮಹಾವಿದ್ಯಾಲಯದ ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಹಾಗೂ ಝೆನ್ಕೆನ್ ಸಂಸ್ಥೆಯ ಜಪಾನೀಸ್

ನಿಟ್ಟೆ : ಜಪಾನ್‌ನ ಝೆನ್ಕೆನ್ ಸಂಸ್ಥೆಯೊಂದಿಗೆ ಒಪ್ಪಂದ Read More »

ಮ್ಯೂಚುವಲ್ ಫಂಡ್ ಉದ್ಯಮ ಕುರಿತು ಉಚಿತ ತರಬೇತಿ

ಕಾರ್ಕಳ : ಬೆಂಗಳೂರಿನ ನಾಲೆಡ್ಜ್ ಬೆಲ್ ಅಕಾಡೆಮಿ ಮತ್ತು ಐಸಿಐಸಿಐ ಫೌಂಡೇಶನ್ ಫಾರ್ ಇನ್‌ಕ್ಲೂಸಿವ್ ಗ್ರೋತ್, ಮ್ಯೂಚುವಲ್ ಫಂಡ್ ಉದ್ಯಮದ ಕುರಿತು ತರಬೇತಿ ನೀಡುತ್ತಿದೆ. 2012ರಲ್ಲಿ ಪ್ರಾರಂಭಗೊಂಡ ಈ ತರಬೇತಿ ಕೇಂದ್ರವು ಮ್ಯೂಚುವಲ್ ಫಂಡ್‌ ಕುರಿತು 20 ಗಂಟೆಗಳ ಆನ್‌ಲೈನ್ ತರಗತಿಯನ್ನೂ ನಡೆಸುತ್ತಿದೆ. ವಿಮಾ ಏಜೆಂಟರು, ಗೃಹಿಣಿಯರು, ನಿವೃತ್ತ ಅಧಿಕಾರಿಗಳು ಸೇರಿದಂತೆ 24 ವರ್ಷಕ್ಕಿಂತ ಮೇಲ್ಪಟ್ಟ ಪದವೀಧರರು ತರಬೇತಿ ಪಡೆಯಬಹುದಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್‌ನಿಂದ ಅಗತ್ಯವಿರುವ ಪ್ರಮಾಣೀಕರಣ ಪಡೆಯಲು ಮತ್ತು ಮ್ಯೂಚುವಲ್ ಫಂಡ್ ವಿತರಕರಾಗಿ

ಮ್ಯೂಚುವಲ್ ಫಂಡ್ ಉದ್ಯಮ ಕುರಿತು ಉಚಿತ ತರಬೇತಿ Read More »

36 ತಾಸು ವ್ಯಾಪಿಸಿದ ಬೆಂಕಿ : 150 ಅಂಗಡಿಗಳು ಭಸ್ಮ

ದೆಹಲಿ : ಚಾಂದಿನಿ ಚೌಕ್‌ನಲ್ಲಿರುವ ಭಾಗೀರಥ್ ಪ್ಯಾಲೇಸ್ ಮಾರುಕಟ್ಟೆಯ ಅಂಗಡಿಗಳಲ್ಲಿ ಗುರುವಾರ ಸಂಭವಿಸಿದ ಭಾರಿ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಅಗ್ನಿಶಾಮಕ ದಳ ಬೆಂಕಿ ನಂದಿಸಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲಿ 100 ಕ್ಕೂ ಅಧಿಕ ಅಗ್ನಿಶಾಮಕ ಟೆಂಡರ್‌ಗಳು ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆಯ ಕಿರಿದಾದ ಮತ್ತು ದಟ್ಟಣೆಯ ಮಾರ್ಗಗಳಿಂದಾಗಿ ಬೆಂಕಿಯನ್ನು ನಂದಿಸಲು ಕಷ್ಟಕರವಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, 150 ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ ಅಂಗಡಿಯೊಂದರಲ್ಲಿ ಬೆಂಕಿ

36 ತಾಸು ವ್ಯಾಪಿಸಿದ ಬೆಂಕಿ : 150 ಅಂಗಡಿಗಳು ಭಸ್ಮ Read More »

ಶ್ರೀ ವೆಂಕಟರಮಣ ಮಹಿಳಾ ಕಾಲೇಜು : ವಿದ್ಯಾರ್ಥಿ ಸಂಘ ಉದ್ಘಾಟನೆ

ಕಾರ್ಕಳ : ಸದೃಢ ವ್ಯಕ್ತಿತ್ವ ರೂಪಣೆಯಲ್ಲಿ ವಿದ್ಯಾರ್ಥಿ ಜೀವನ ಮಹತ್ವವಾದದು. ತರಗತಿ ಪಾಠದೊಂದಿಗೆ ಸನ್ನಡತೆ, ಶಿಸ್ತುಬದ್ಧ ಜೀವನ, ನೈತಿಕ ಮೌಲ್ಯಗಳನ್ನು ಕಾಲೇಜು ಶಿಕ್ಷಣ ನೀಡುತ್ತದೆ. ಕಲಿಕೆಯಲ್ಲಿ ಪಡೆದ ಜೀವನಾನುಭಾವದ ಜೊತೆಗೆ ಅಂತರಂಗ ಶುದ್ದಿಯ ಮೂಲಕ ದೇಶದ ಸಮಗ್ರ ಶಾಂತಿಯನ್ನು ಕಾಪಾಡಲು ಸಾಧ್ಯ ಎಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೋಸೆಫ್ ಎನ್. ಎಮ್. ಹೇಳಿದರು. ಅವರು ನ. 24 ರಂದು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ

ಶ್ರೀ ವೆಂಕಟರಮಣ ಮಹಿಳಾ ಕಾಲೇಜು : ವಿದ್ಯಾರ್ಥಿ ಸಂಘ ಉದ್ಘಾಟನೆ Read More »

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮ

ಕಲೆ ಮತ್ತು ಸಂಸ್ಕೃತಿಯಿಂದ ಉತ್ತಮ ನಾಗರಿಕ ಸಮಾಜ ನಿರ್ಮಾಣ : ವಿ. ಸುನಿಲ್‌ ಕುಮಾರ್‌ ಕಾರ್ಕಳ : ಅಭಿವೃದ್ಧಿ ಅಂದರೆ ಕೇವಲ ರಸ್ತೆ, ಸೇತುವೆ ನಿರ್ಮಾಣ ಮಾತ್ರವಲ್ಲ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹೀಗೆ ಪ್ರತಿಯೊಂದು ಕ್ಷೇತ್ರಗಳ ಪ್ರಗತಿಯಾಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದಾಗ ಮಾತ್ರ ಕಾರ್ಕಳವನ್ನು ಬ್ರಾಂಡ್‌ನನ್ನಾಗಿ ಮಾಡುವ ಸಂಕಲ್ಪ ಈಡೇರುತ್ತದೆ. ಸಾಹಿತ್ಯ, ಉದ್ದಿಮೆ, ಆಡಳಿತ, ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸುವುದರಿಂದ ಇನ್ನಷ್ಟು ಸಾಧಕರು ಬೆಳಕಿಗೆ ಬರುತ್ತಾರೆ. ಕಲೆ ಮತ್ತು ಸಂಸ್ಕೃತಿ ಆಧಾರಿತ ಚಟುವಟಿಕೆಗಳಿಂದ ಉತ್ತಮ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮ Read More »

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಹೃದಯಾಘಾತದಿಂದ ನಿಧನ

ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ರೋಣ-ಗದಗ ಕ್ಷೇತ್ರದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನ. 25 ರಂದು ಬೆಂಗಳೂರಿನ ಹೊರವಲಯದ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಶ್ರೀಶೈಲಪ್ಪ ಅವರು ಸಭೆ ಆರಂಭದಲ್ಲೇ ವಾಂತಿಯಾಗಿ ಕುಸಿದುಬಿದ್ದಿದ್ದಾರೆ. ಕೂಡಲೇ ಕಾರ್ಯಕರ್ತರು ಶ್ರೀಶೈಲಪ್ಪ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಹೃದಯಾಘಾತದಿಂದ ನಿಧನ Read More »

ಪುರಸಭೆ ಆರೋಗ್ಯ ನಿರೀಕ್ಷಕಿಗೆ ಬೆದರಿಕೆ : ದೂರು ದಾಖಲು

ಕಾರ್ಕಳ : ಕಾರ್ಕಳ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್ ಅವರನ್ನು ವ್ಯಕ್ತಿಯೊಬ್ಬರು ಕಚೇರಿಯಲ್ಲೇ ನಿಂದಿಸಿ ಬೆದರಿಕೆ ಹಾಕಿದ ಕುರಿತು ಪೊಲೀಸ್‌ ದೂರು ದಾಖಲಾಗಿದೆ. ಲೈಲಾ ಥೋಮಸ್ ಅವರು ಗುರುವಾರ ಪುರಸಭೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಉಮೇಶ್ ಕಲ್ಲೊಟ್ಟೆ ಎಂಬಾತ ಅಲ್ಲಿಗಾಗಮಿಸಿ, ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ಟ್ರೇಡ್ ಲೈಸೆನ್ಸ್‌ ಕೋರಿ ಅರ್ಜಿ ಸಲ್ಲಿಸಿದ್ದರೂ ಕೂಡ ಈವರೆಗೆ ನನಗೆ ಯಾಕೆ ಟ್ರೇಡ್ ಲೈಸೆನ್ಸ್‌‌ ನೀಡಿರುವುದಿಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿರುತ್ತಾನೆ.

ಪುರಸಭೆ ಆರೋಗ್ಯ ನಿರೀಕ್ಷಕಿಗೆ ಬೆದರಿಕೆ : ದೂರು ದಾಖಲು Read More »

error: Content is protected !!
Scroll to Top