Thursday, December 1, 2022
spot_img
Homeಸುದ್ದಿಪುರಸಭೆ ಆರೋಗ್ಯ ನಿರೀಕ್ಷಕಿಗೆ ಬೆದರಿಕೆ : ದೂರು ದಾಖಲು

ಪುರಸಭೆ ಆರೋಗ್ಯ ನಿರೀಕ್ಷಕಿಗೆ ಬೆದರಿಕೆ : ದೂರು ದಾಖಲು

ಕಾರ್ಕಳ : ಕಾರ್ಕಳ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್ ಅವರನ್ನು ವ್ಯಕ್ತಿಯೊಬ್ಬರು ಕಚೇರಿಯಲ್ಲೇ ನಿಂದಿಸಿ ಬೆದರಿಕೆ ಹಾಕಿದ ಕುರಿತು ಪೊಲೀಸ್‌ ದೂರು ದಾಖಲಾಗಿದೆ. ಲೈಲಾ ಥೋಮಸ್ ಅವರು ಗುರುವಾರ ಪುರಸಭೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಉಮೇಶ್ ಕಲ್ಲೊಟ್ಟೆ ಎಂಬಾತ ಅಲ್ಲಿಗಾಗಮಿಸಿ, ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ಟ್ರೇಡ್ ಲೈಸೆನ್ಸ್‌ ಕೋರಿ ಅರ್ಜಿ ಸಲ್ಲಿಸಿದ್ದರೂ ಕೂಡ ಈವರೆಗೆ ನನಗೆ ಯಾಕೆ ಟ್ರೇಡ್ ಲೈಸೆನ್ಸ್‌‌ ನೀಡಿರುವುದಿಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿರುತ್ತಾನೆ. ಟ್ರೇಡ್ ಲೈಸೆನ್ಸ್‌‌ ನೀಡುವ ಬಗ್ಗೆ ನಮ್ಮ ಮೇಲಾಧಿಕಾರಿಯವರಲ್ಲಿ ಕೇಳುವಂತೆ ತಿಳಿಸಿದಾಗ ತನಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ಲೈಲಾ ಅವರು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

LEAVE A REPLY

Please enter your comment!
Please enter your name here

Most Popular

error: Content is protected !!