Author name: Newskarkala Desk

ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

ಉದ್ಯೋಗ ಮಾಹಿತಿ CSIF: ಇನ್ ಸ್ಟೇಬಲ್/ಟ್ರೇಡ್ ಮ್ಯಾನ್ ಹುದ್ದೆಗಳು, ವಿದ್ಯಾರ್ಥಿ ಎಸ್.ಎಸ್.ಎಲ್‌. ಸಿ. ಕೊನೆಯ ದಿನಾಂಕ – 20-12-2022. ಸಿಬ್ಬಂದಿ ನೇಮಕಾತಿ ಆಯೋಗ(SSC): ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್, ಲೋವರ್ ಡಿವಿಷನ್ ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು. ವಿದ್ಯಾರ್ಹತೆ: ಪಿಯುಸಿ. ಕೊನೆಯ ದಿನಾಂಕ: 04-01-2023. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BPL): ಪ್ರೊಜೆಕ್ಟ್ ಮತ್ತು ಟ್ರೈನಿ ಇಂಜಿನಿಯರ್ ಹುದ್ದೆಗಳು, ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ. ಕೊನೆಯ ದಿನಾಂಕ: 14-12-2022. AGNIPATH: ಭಾರತೀರರು ನೌಕಪಡೆಯ ಅಗ್ನಿವೀರರ (ಮಹಿಳೆ ಮತ್ತು ಪುರುಷ) ಹುದ್ದೆಗಳಿಗೆ […]

ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »

ಕಾರ್ಕಳ : ಹಸುಗಳಿಗೆ ಚಿಕಿತ್ಸಾ ಅಭಿಯಾನ – ಲುಂಪಿ ವೈರಸ್ ನಿವಾರಣೆಗಾಗಿ ಇಂಜೆಕ್ಷನ್‌

ಕಾರ್ಕಳ : ಲುಂಪಿ ವೈರಸ್ ಬಾಧೆಯು ಹಸುಗಳಿಗೆ ವ್ಯಾಪಕವಾಗಿ ಹರಡುತ್ತಿದೆ. ಕಾರ್ಕಳದಲ್ಲೂ 60ಕ್ಕೂ ಅಧಿಕ ಜಾನುವಾರುಗಳು ಲುಂಪಿ ವೈರಸ್ ಬಾಧೆಗೆ ಒಳಗಾದ ಪ್ರಕರಣ ದಾಖಲಾಗಿದೆ. ರೋಗ ನಿವಾರಣೆ ಹಾಗೂ ರೋಗ ಬಾರದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ತುರ್ತಾಗಿ ಹಸುಗಳಿಗೆ ಇಂಜೆಕ್ಷನ್ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಕಳದ ವಿವಿಧ ಭಾಗದಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಹಸುಗಳಿಗೆ ಚಿಕಿತ್ಸಾ ಅಭಿಯಾನ ನಡೆಯಲಿದೆ. ಇಂಜೆಕ್ಷನ್ ಇರುವ ಬಾಟಲ್ ಒಮ್ಮೆ ಓಪನ್ ಮಾಡಿದರೆ ಕನಿಷ್ಠ 100 ಹಸುಗಳಿಗೆ ಇಂಜೆಕ್ಷನ್ ಮಾಡಬೇಕಾಗುತ್ತದೆ

ಕಾರ್ಕಳ : ಹಸುಗಳಿಗೆ ಚಿಕಿತ್ಸಾ ಅಭಿಯಾನ – ಲುಂಪಿ ವೈರಸ್ ನಿವಾರಣೆಗಾಗಿ ಇಂಜೆಕ್ಷನ್‌ Read More »

ವಕೀಲ ಕುಲದೀಪ್‌ ಶೆಟ್ಟಿ ಮೇಲೆ ಹಲ್ಲೆ ಪ್ರಕರಣ : ಪೂಂಜಾಲಕಟ್ಟೆ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ

ಬೆಳ್ತಂಗಡಿ : ವಕೀಲ ಕುಲದೀಪ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುತೇಶ್ ಅವರನ್ನು ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿದ ಪೂಂಜಾಲಕಟ್ಟೆ ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿ ವಕೀಲರು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಕುರಿತು ಎಸ್.ಪಿ ನೇತೃತ್ವದಲ್ಲಿ ಪುತ್ತೂರು ಡಿವೈಎಸ್ಪಿ ಆಂತರಿಕ ತನಿಖೆ ನಡೆಸಿದ್ದರು. ಇದರ ವರದಿಯ ಬೆನ್ನಲ್ಲೇ ಪುಂಜಾಲಕಟ್ಟೆ ಪೊಲೀಸ್‌

ವಕೀಲ ಕುಲದೀಪ್‌ ಶೆಟ್ಟಿ ಮೇಲೆ ಹಲ್ಲೆ ಪ್ರಕರಣ : ಪೂಂಜಾಲಕಟ್ಟೆ ಸಬ್ ಇನ್ಸ್‌ಪೆಕ್ಟರ್ ವರ್ಗಾವಣೆ Read More »

ಕಮರದಿರಲಿ ಎಳೆ ಜೀವಗಳು

ವಿದ್ಯಾರ್ಥಿಗಳ ಆತ್ಮಹತ್ಯೆ ಆತಂಕದಲ್ಲಿ ಪೋಷಕರು ✒️ ನಳಿನಿ ಎಸ್. ಸುವರ್ಣ ಭವ್ಯ ಭಾರತದ ಭಾವಿ ಪ್ರಜೆಗಳು ಎಂದು ಕರೆಸಿಕೊಳ್ಳುವ ಮಕ್ಕಳು ಆತ್ಮಹತ್ಯೆಯತ್ತ ಮುಖಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ. ಎಲ್ಲ ಆರಂಭಕ್ಕೂ ಅಂತ್ಯ ಎಂಬುದು ಇದ್ದೇ ಇರುತ್ತದೆ, ಆದರೆ ಆ ಅಂತ್ಯ ಸಹಜವಾಗಿರಬೇಕು. ಭವಿಷ್ಯದ ಬಗ್ಗೆ ಆಸೆ ಆಕಾಂಕ್ಷೆಗಳನ್ನು ಹೊಂದಿರಬೇಕಾದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸಣ್ಣಪುಟ್ಟ ವಿಚಾರಗಳಿಗೆ ಮನನೊಂದು ಆತ್ಮಹತ್ಯೆಯ ನಿರ್ಧಾರ ಕೈಗೆತ್ತಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಲೇ ಇದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ 2020ರಲ್ಲಿ

ಕಮರದಿರಲಿ ಎಳೆ ಜೀವಗಳು Read More »

ಕೌಡೂರಿನಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿ : ಮೂವರಿಗೆ ಗಾಯ

ಕಾರ್ಕಳ : ಕೌಡೂರು ಗ್ರಾಮದ ಹೇರಟ್ಟ ಎಂಬಲ್ಲಿ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದು ಯುವತಿ ಸಹಿತ ಮೂವರು ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ದತ್ತ ಸಾಲಿನ್ಸ್‌ ಎಂಬವರು ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವಾಗ ಎದುರಿನಿಂದ ಬಂದ ಉದಯ ಎಂಬವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಉದಯ ಹಾಗೂ ವಾಹನದ ಹಿಂಬದಿ ಸವಾರೆ ಶಾಲಿನಿ ಮತ್ತು ದತ್ತ ಸಾಲಿನ್ಸ್‌ ಅವರು ಗಾಯಗೊಂಡಿದ್ದಾರೆ. ದತ್ತ ಸಾಲಿನ್ಸ್‌ ಅವರ ತಲೆಗೆ ಗಂಭೀರ ಸ್ವರೂಪದ ಏಟು ಬಿದ್ದಿದೆ.

ಕೌಡೂರಿನಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿ : ಮೂವರಿಗೆ ಗಾಯ Read More »

ಪಂಪ್‌ವೆಲ್‌ನಲ್ಲಿ ನೋಟಿನ ಬಂಡಲ್‌ ಪತ್ತೆ : 3,48,500 ರೂ. ಪೊಲೀಸರ ವಶ

ಮಂಗಳೂರು : ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ಮೆಕ್ಯಾನಿಕ್ ಶಿವರಾಜ್ ಎಂಬವರಿಗೆ ಸಿಕ್ಕಿದ್ದ ಹಣದ ಬಂಡಲ್‌ಗೆ ಸಂಬಂಧಿಸಿ ಮತ್ತೆ 2,99,500 ರೂ.ಗಳು ಪೊಲೀಸರ ವಶವಾಗಿದೆ. ಆದರೆ ಈವರೆಗೂ ಹಣ ಯಾರದು, ದಾರಿ ಮಧ್ಯೆ ಹೇಗೆ ಬಿದ್ದು ಸಿಕ್ಕಿತು ? ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹಣದ ಬಂಡಲ್‌ಗಳ ಪ್ರಕರಣದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಅನಾಮಧೇಯ ಹಣದ ಕಟ್ಟುಗಳ ವಾರಿಸುದಾರರು ಇದ್ದಲ್ಲಿ, ಸಂಬಂಧಪಟ್ಟ ಠಾಣೆಗೆ ಸೂಕ್ತ ಮಾಹಿತಿಯೊಂದಿಗೆ

ಪಂಪ್‌ವೆಲ್‌ನಲ್ಲಿ ನೋಟಿನ ಬಂಡಲ್‌ ಪತ್ತೆ : 3,48,500 ರೂ. ಪೊಲೀಸರ ವಶ Read More »

ಕ್ರೈಸ್ಟ್‌ಕಿಂಗ್:‌ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರೇರಣಾ ಜಿ. ರಾವ್‌ಗೆ ದ್ವಿತೀಯ ಸ್ಥಾನ

ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ವತಿಯಿಂದ ಕುಂದಾಪುರದ ಕೋಟೇಶ್ವರ ಕೆ.ಪಿ.ಎಸ್ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರೇರಣಾ ಜಿ. ರಾವ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಪ್ರಥಮ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಕ್ರೈಸ್ಟ್‌ಕಿಂಗ್:‌ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರೇರಣಾ ಜಿ. ರಾವ್‌ಗೆ ದ್ವಿತೀಯ ಸ್ಥಾನ Read More »

ಕ್ಷತ್ರಿಯ ಮರಾಠ ಸಮಾಜದಿಂದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ

ಪ್ರವರ್ಗ 3ಬಿ ಯಿಂದ 2ಎ ಗೆ ಸೇರ್ಪಡೆಗೊಳಿಸುವಂತೆ ಆಗ್ರಹ ಕಾರ್ಕಳ : ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರ್ಪಡೆಗೊಳಿಸುವಂತೆ ಡಿ. 7 ರಂದು ಜಿಲ್ಲೆಯ ಸಮಾಜ ಬಾಂಧವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಯವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ ಪ್ರಕಾಶ್‌ ರಾವ್‌ ಕವಡೆ, ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಇಲ್ಲಿಯವರೆಗೆ ಮರಾಠ ಸಮುದಾಯವನ್ನು 2ಎ ಗೆ ಸೇರ್ಪಡೆಗೊಳಿಸುವ ಬೇಡಿಕೆಯನ್ನು

ಕ್ಷತ್ರಿಯ ಮರಾಠ ಸಮಾಜದಿಂದ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ Read More »

ಹೆಬ್ರಿ ಪಂಚಾಯತ್‌ ಇನ್ನು ಮುಂದೆ ಕ್ಯಾಶ್‌ಲೆಸ್‌

ಕಾರ್ಕಳ : ಸರಕಾರಿ ವ್ಯವಸ್ಥೆಗಳು ಡಿಜಿಟಲ್‌ ವ್ಯವಸ್ಥೆಯೊಂದಿಗೆ ಬದಲಾವಣೆ, ಮಾರ್ಪಾಡಾಗುತ್ತಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದು. ಪಾರದರ್ಶಕತೆಯೊಂದಿಗೆ ವಿಳಂಬ ನೀತಿಗೆ ಮುಕ್ತಿ ದೊರೆಯುವುದು. ಹೆಬ್ರಿ ಪಂಚಾಯತ್‌ ಈ ನಿಟ್ಟಿನಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಸಂಪೂರ್ಣವಾಗಿ ಕ್ಯಾಶ್‌ಲೆಸ್‌ ವ್ಯವಸ್ಥೆ ಅನುಷ್ಠಾನಗೊಳಿಸುವತ್ತ ಮುಂದಾಗಿದೆ. ಕಳೆದ ಅ. 1ರಿಂದ ಹೆಬ್ರಿ ಪಂಚಾಯತ್‌ನಲ್ಲಿ ಮನೆ, ವಾಣಿಜ್ಯ ತೆರಿಗೆ, ಟ್ರೇಡ್‌ ಲೈಸನ್ಸ್‌, ನೀರಿನ ಬಿಲ್‌ ಎಲ್ಲವನ್ನೂ ಗ್ರಾಮಸ್ಥರು ಸುಲಭವಾಗಿ ಆನ್‌ಲೈನ್‌ ಮೂಲಕ ಜಮೆ ಮಾಡುತ್ತಿದ್ದಾರೆ.‌ ಸ್ವೈಪ್‌, ಗೂಗಲ್‌ ಪೇ, ಫೋನ್‌ ಪೇ, ಕ್ಯೂಆರ್‌ ಕೋಡ್ ಮೂಲಕ‌ ಬಿಲ್ ಪಾವತಿಸುತ್ತಿದ್ದಾರೆ.

ಹೆಬ್ರಿ ಪಂಚಾಯತ್‌ ಇನ್ನು ಮುಂದೆ ಕ್ಯಾಶ್‌ಲೆಸ್‌ Read More »

ಕಾಲು ಜಾರಿ ಬಾವಿಗೆ ಬಿದ್ದ ವ್ಯಕ್ತಿ ಸಾವು

ಕಾರ್ಕಳ: ನೀರು ತರಲೆಂದು ಬಾವಿಗೆ ಇಳಿಯುವಾಗ ಕಾಲು ಜಾರಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಡಿ.6ರಂದು ಕುಕ್ಕುಂದೂರಿನ ಮೇಲ್ಜಡ್ಡು ದರ್ಖಾಸು ಎಂಬಲ್ಲಿ ಸಂಭವಿಸಿದೆ. ಚುಕುಡ (65) ಎಂಬವರು ಮನೆ ಸಮೀಪ ಇರುವ ತೋಟದ ಗಿಡಗಳಿಗೆ ಹಾಕಲೆಂದು ಬಾವಿಗೆ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟರು. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಕಾಲು ಜಾರಿ ಬಾವಿಗೆ ಬಿದ್ದ ವ್ಯಕ್ತಿ ಸಾವು Read More »

error: Content is protected !!
Scroll to Top