ಕಾರ್ಕಳ: ನೀರು ತರಲೆಂದು ಬಾವಿಗೆ ಇಳಿಯುವಾಗ ಕಾಲು ಜಾರಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಡಿ.6ರಂದು ಕುಕ್ಕುಂದೂರಿನ ಮೇಲ್ಜಡ್ಡು ದರ್ಖಾಸು ಎಂಬಲ್ಲಿ ಸಂಭವಿಸಿದೆ. ಚುಕುಡ (65) ಎಂಬವರು ಮನೆ ಸಮೀಪ ಇರುವ ತೋಟದ ಗಿಡಗಳಿಗೆ ಹಾಕಲೆಂದು ಬಾವಿಗೆ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.