ತಂಬಾಕು ಉತ್ಪನ್ನ ಹೊಂದಿದ್ದ ಅಂಗಡಿಗಳಿಗೆ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ದಾಳಿ – ದಂಡ

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಅವರ ನೇತೃತ್ವದಲ್ಲಿ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ಹೊಂದಿದ್ದ ಅಂಗಡಿಗಳಿಗೆ ದಂಡ ವಿಧಿಸಿದ ಘಟನೆ ಮೇ 21ರಂದು ನಡೆದಿದೆ.
ಸುಮಾರು 21 ಅಂಗಡಿಗಳಿಗೆ ಉಡುಪಿ ಜಿಲ್ಲಾ ತಂಡದ ಜೊತೆಯಾಗಿ ತಾಲೂಕು ಆರೋಗ್ಯಾಧಿಕಾರಿಯವರ ತಂಡ ದಾಳಿ ನಡೆಸಿತು. ತಂಬಾಕು ಉತ್ಪನ್ನಗಳನ್ನು ಹೊಂದಿದ್ದ ಹಾಗೂ ಎಚ್ಚರಿಕಾ ಸೂಚನಾ ಫಲಕ ಅಳವಡಿಸಿದ ಅಂಗಡಿಗಳಿಗೆ ದಂಡ ವಿಧಿಸಿ, ಕಾನೂನು ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ ವಸಂತ ಶೆಟ್ಟಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಕೆ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಚಂದ್ರ ಕಾರಂತ, ಕಾರ್ಕಳ ನಗರ ಪೊಲೀಸ್‌ ಠಾಣಾ ಎಎಸ್‌ಐ ಮೂರ್ತಿ ಕೆ., ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಎಪಿಡಿಮೊಲಾಜಿಸ್ಟ್‌ ನಿರೀಕ್ಷಾ, ಉಡುಪಿ ಎನ್‌ಟಿಸಿಪಿ ಸಾಮಾಜಿಕ ಕಾರ್ಯಕರ್ತ ಮಹೇಶ್ ದೇಶ ಭಂಡಾರಿ, ಇಲಾಖಾ ಸಿಬ್ಬಂದಿ ದಿನೇಶ್ ಮತ್ತು ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.













































\















error: Content is protected !!
Scroll to Top