ಇನ್ಮುಂದೆ ವಾಹನಗಳ ವೇಗಕ್ಕೆ ಬ್ರೇಕ್‌ – ಉಡುಪಿ ಜಿಲ್ಲೆಯಲ್ಲಿ ಸ್ಪೀಡ್‌ ರಾಡರ್‌ ಕ್ಯಾಮೆರಾ ಕಾರ್ಯಾರಂಭ

ಉಡುಪಿ : ಜಿಲ್ಲೆಯಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅತಿ ವೇಗದ ಚಾಲನೆಗೆ ಕಡಿವಾಣ ಹಾಕಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ರಾಷ್ಟ್ರೀಯ ಹೆದ್ದಾರಿಯ ಪ್ರಮುಖ 6 ಆಯಕಟ್ಟಿನ ಸ್ಥಳಗಳಲ್ಲಿ ಅತ್ಯಾಧುನಿಕ ‘ಸ್ಪೀಡ್ ರಾಡಾರ್ ಕ್ಯಾಮೆರಾ’ ವ್ಯವಸ್ಥೆಯನ್ನು ಅಳವಡಿಸಿದೆ. ಈಗಾಗಲೇ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ.

ಪ್ರಮುಖ 6 ಸ್ಥಳಗಳು ಮತ್ತು ನಿಗದಿಪಡಿಸಿದ ವೇಗ ಮಿತಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ ಈ ಕೆಳಗಿನ ಆರು ಸ್ಥಳಗಳನ್ನು ಗುರುತಿಸಿ, ಅಲ್ಲಿ ವೇಗ ಮಿತಿಯ ಬೋರ್ಡ್‌ಗಳೊಂದಿಗೆ ಕ್ಯಾಮೆರಾ ಅಳವಡಿಸಲಾಗಿದೆ:
1 ಕಾರ್ಕಳ – ದೂಪದಕಟ್ಟೆ : ಗರಿಷ್ಠ ವೇಗ ಮಿತಿ 60 KMHP
2 ಪಡುಬಿದ್ರೆ – ಉಚ್ಚಿಲ: ಗರಿಷ್ಠ ವೇಗ ಮಿತಿ 80 KMHP
3 ಕಾಪು – ದಂಡತೀರ್ಥ: ಗರಿಷ್ಠ ವೇಗ ಮಿತಿ 80 KMHP
4 ಕೋಟ – ತೆಕ್ಕಟ್ಟೆ: ಗರಿಷ್ಠ ವೇಗ ಮಿತಿ 80 KMHP
5 ಗಂಗೊಳ್ಳಿ – ತ್ರಾಸಿ: ಗರಿಷ್ಠ ವೇಗ ಮಿತಿ 80 KMHP
6 ಬೈಂದೂರು – ನಾಯಕನ ಕಟ್ಟೆ: ಗರಿಷ್ಠ ವೇಗ ಮಿತಿ 80 KMHP

ಪ್ರಸ್ತುತ ಈ 6 ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಇನ್ನೂ 14 ಸ್ಥಳಗಳಿಗೆ ಟೆಂಡರ್ ಒಪ್ಪಿಗೆಯಾಗಿದ್ದು ಶೀಘ್ರ ಅಳವಡಿಕೆ ಕಾರ್ಯ ನಡೆಯಲಾಗುವುದು.

ರಾಡಾರ್ ಕ್ಯಾಮೆರಾ ಪತ್ತೆ ಮಾಡುವ ಉಲ್ಲಂಘನೆಗಳು :
ಈ ಅತ್ಯಾಧುನಿಕ ರಾಡಾರ್ ಕ್ಯಾಮೆರಾಗಳು ಕೇವಲ ವಾಹನಗಳ ವೇಗವನ್ನು ಮಾತ್ರ ಪತ್ತೆ ಹಚ್ಚುವುದಿಲ್ಲ, ಬದಲಾಗಿ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರತಿಯೊಂದು ಚಟುವಟಿಕೆಯನ್ನೂ ಸೆರೆಹಿಡಿಯಲಿವೆ:
ಅತಿವೇಗ ಚಾಲನೆ
ಟ್ರಿಪಲ್ ರೈಡಿಂಗ್
ಸೀಟ್ ಬೆಲ್ಟ್ ಧರಿಸದಿರುವುದು
ಹೆಲ್ಮೆಟ್ ರಹಿತ ಚಾಲನೆ
ಮೊಬೈಲ್ ಬಳಸುತ್ತಾ ಚಾಲನೆ ಮಾಡುವುದು
ತಪ್ಪು ದಿಕ್ಕಿನಲ್ಲಿ ಚಾಲನೆ
ಇತರ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಗಳು.

ಕಾರ್ಯನಿರ್ವಹಣೆ
ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯ ಪ್ರಕಾರ, ಈ ಕ್ಯಾಮೆರಾಗಳ ನೇರ ಸಂಪರ್ಕವನ್ನು ಜಿಲ್ಲಾ ನಿಯಂತ್ರಣ ಕೊಠಡಿಗೆ ನೀಡಲಾಗಿದೆ. ಅಲ್ಲಿಂದಲೇ ಸಿಬ್ಬಂದಿ 24×7 ವಾಹನಗಳ ಚಲನವಲನಗಳನ್ನು ಹದ್ದಿನ ಕಣ್ಣಿನಿಂದ ಮಾನಿಟರ್ ಮಾಡಲಿದ್ದಾರೆ. ನಿಯಮ ಉಲ್ಲಂಘಿಸಿದ ತಕ್ಷಣವೇ ಡಿಜಿಟಲ್ ಸಾಕ್ಷ್ಯಗಳೊಂದಿಗೆ ದಂಡದ ಚಲನ್‌ಗಳನ್ನು ಸಿದ್ಧಪಡಿಸಿ, ವಾಹನ ಮಾಲೀಕರ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುವುದು.

ದಂಡದ ಚಲನ್ ತಲುಪಿದ 7 ದಿನಗಳ ಒಳಗಾಗಿ ವಾಹನ ಸವಾರರು ಉಡುಪಿ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ಭೇಟಿ ನೀಡಿ ನಿಯಮಾನುಸಾರ ದಂಡದ ಮೊತ್ತವನ್ನು ಪಾವತಿಸಬೇಕು. ಸಂಚಾರದ ಯಾವುದೇ ತುರ್ತು ಸಂದರ್ಭಗಳಿಗಾಗಿ ‘ನಮ್ಮ 112’ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.







































































































error: Content is protected !!
Scroll to Top