ಕಾರ್ಕಳ : ಆನ್‍ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ಮಾಡುವುದನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಓಸಿಡಿ) ಇಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಕಾರ್ಕಳ ತಾಲೂಕಿನಲ್ಲೂ ಬಂದ್‍ಗೆ ಬೆಂಬಲ ನೀಡಿದ್ದು ಅಪೊಲೋ, ಜನೌಷಧಿ ಹೊರತುಪಡಿಸಿ ತಾಲೂಕಿನಾದ್ಯಂತ ಸುಮಾರು 42 ಮೆಡಿಕಲ್‌ಗಳು ಬಂದ್ ಆಗಿದೆ.
ತಹಶೀಲ್ದಾರರಿಗೆ ಮನವಿ
ಕಾರ್ಕಳ ತಾಲೂಕಿನ ವಿವಿಧ ಮೆಡಿಕಲ್‌ಗಳ ಮಾಲಕರು, ಸಿಬ್ಬಂದಿಗಳು ಆನ್‍ಲೈನ್ ಇ-ಫಾರ್ಮಸಿಗಳು ಮತ್ತು ಕ್ವಿಕ್ ಕಾಮರ್ಸ್ ಆಪ್‍ಗಳ ಬಂದ್‌ಗೆ ಆಗ್ರಹಿಸಿ ಕಾರ್ಕಳ ತಹೀಲ್ದಾರರಿಗೆ ಮನವಿ ನೀಡಿದರು. ಉಪತಹಶೀಲ್ದಾರ್ ಮಂಜುನಾಥ್ ಅವರು ಮನವಿ ಸ್ವೀಕರಿಸಿದರು.
ಕಾರ್ಕಳ ಹಿರಿಯ ಎಂ. ರಮಾನಂದ ಪೈ (ಲತಾ ಮೆಡಿಕಲ್), ಆರ್. ಅಶೋಕ್ ಶೆಣೈ (ವಿ.ವಿ.ಶೆಣೈ), ನರೇಂದ್ರ ಕಾಮತ್ (ಹೆಲ್ತ್ ಫಾರ್ಮ್), ರಾಮಕೃಷ್ಣ ಪೈ (ಮಹಮ್ಮಾಯ ಮೆಡಿಕಲ್), ಸತ್ಯೆಂದ್ರ ಭಟ್ (ದಿವ್ಯ ಮೆಡಿಕಲ್ ಅಜೆಕಾರು), ಬೆಳ್ಮಣ್ ಫೇರಾವೋ ಮಡಿಕಲ್ ಸಿಬ್ಬಂದಿ, ಜ್ಯೋತಿ ಮೆಡಿಕಲ್ ಕಾರ್ಕಳ ಸಿಬ್ಬಂದಿ, ರಿಮಾಝ್ ಹೋರಿಸ್ (ವೆಲ್‌ನೆಸ್ ಫಾರ್ಮ ಬಂಡಿಮಠ), ಧನಂಜಯ್ (ಅಜೆಕಾರು ಮೆಡಿಕಲ್), ಪ್ರಸಾದ್ ಜೈನ್ (ಮಹಾವೀರ ಮೆಡಿಕಲ್ ಹೊಸ್ಮಾರು), ಕಾರ್ಕಳ ಸಿಟಿ ಮೆಡಿಕಲ್ ಸಿಬ್ಬಂದಿ, ಭಾಗ್ಯ ಮೆಡಿಕಲ್ ಸಿಬ್ಬಂದಿ, ವಿನೋದ್ ಕೋಟ್ಯಾನ್ (ಎಸ್.ವಿ. ಮೆಡಿಕಲ್ಸ್ ಆನೆಕೆರೆ), ಸಿದ್ಧಿವಿನಾಯಕ ಮತ್ತು ಎಸ್.ಕೆ. ಮೆಡಿಕಲ್ ಜೋಡುರಸ್ತೆ ಸಿಬ್ಬಂದಿ, ಮಂಜುಶ್ರೀ ಮೆಡಿಕಲ್ ಬೈಲೂರು ಸೇರಿದಂತೆ ವಿವಿಧ ಮೆಡಿಕಲ್‌ಗಳ ಮಾಲಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.








