ಕಾರ್ಕಳ : ಮಾಳ ಚೌಕಿ ನರ್ಸಬೆಟ್ಟು ಶ್ರೀ ಮಂತ್ರದೇವತೆ ಕೊರಗಜ್ಜ ಸನ್ನಿಧಿಯಲ್ಲಿ ಮೇ 23ರಿಂದ ವರ್ಷಾವಧಿ ದೊಂದಿ ಬೆಳಕಿನ ನೇಮೋತ್ಸವ ನಡೆಯಲಿದೆ. ಸಂಜೆ 5 ಗಂಟೆಗೆ ಭಂಡಾರ ಇಳಿಯುವುದು, 6 ರಿಂದ 7 ಗಂಟೆಯವರೆಗೆ ಭಜನೋತ್ಸವ, 8.30ರಿಂದ ಅನ್ನಸಂತರ್ಪಣೆ ನಡೆಯಲಿದ್ದು, 9 ಗಂಟೆಯಿಂದ ಮಂತ್ರದೇವತೆ ಹಾಗೂ ಕೊರಗಜ್ಜ ದೈವದ ದೊಂದಿ ಬೆಳಕಿನ ನೇಮೋತ್ಸವ ನಡೆಯಲಿದೆ.
ಸಭಾ ಕಾರ್ಯಕ್ರಮ
ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಅರುಣ್ ಉಳ್ಳಾಲ್ ಉಪನ್ಯಾಸ ನೀಡಲಿದ್ದು, ಅಶೋಕ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ರಘುರಾಮ ಶೆಟ್ಟಿ ಮಾಳ, ಸಂದೇಶ್ ಮೂಲ್ಯ ಹಾಗೂ ಸುಕೇಶ್ ಶೆಟ್ಟಿ ತೆಳ್ಳಾರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಅಕ್ಕಿ ವಿತರಣೆ ಹಾಗೂ ಗೌರವ ಸಮರ್ಪಣೆ ಜರುಗಲಿದೆ.





