ಶ್ರೀ ಕಾಂತೇಶ್ವರ ಪ್ರೌಢಶಾಲೆ – ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿ ಉದ್ಘಾಟನೆ

ಕಾರ್ಕಳ : ಕಾಂತಾವರ ಶ್ರೀ ಕಾಂತೇಶ್ವರ ಪ್ರೌಢಶಾಲೆಯಲ್ಲಿ ಮಾ. 13ರಂದು ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ರಂಜಿತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಛಾಯಾ ಉಪಾಧ್ಯಾಯ ಮಾತನಾಡಿ, ಜಗತ್ತಿನ ಜನರ ಜೊತೆ ಔದ್ಯೋಗಿಕ ರಂಗದಲ್ಲಿ ಮುಂದುವರಿಯಲು ಇಂಗ್ಲಿಷ್ ಭಾಷೆ ಅವಶ್ಯ. ಮಾತುಗಾರಿಕೆಯಲ್ಲಿ ಚಾಣಾಕ್ಷತೆ ಇದ್ದರೆ ನಮ್ಮ ಔದ್ಯೋಗಿಕ ರಂಗದಲ್ಲಿ ಸಾಧನೆ ಮತ್ತು ಜಗತ್ತಿನ ಜೊತೆ ಬೆರೆಯಲು ಸಾಧ್ಯ ಎಂದು ಹೇಳಿದರು. ಶಾಲೆಯ ಪೂರ್ವ ವಿದ್ಯಾರ್ಥಿಗಳಾದ ಸುದರ್ಶನ್ ಮತ್ತು ಸುಕೇಶ್ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಭಾಷೆಯ ಅವಶ್ಯಕತೆಯನ್ನು ವಿವಿರಿಸಿದರು. ಪ್ರಮುಖರಾದ ಸಂಜೀವ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ, ಶಾಲೆಯ ಹಿರಿಯ ಶಿಕ್ಷಕ ಪ್ರಕಾಶ್ ಕೋಟ್ಯಾನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿಯರಾದ ರೇಖಾ ನಿರೂಪಿಸಿ, ರಮ್ಯ ವಂದಿಸಿದರು.











































































error: Content is protected !!
Scroll to Top