ಉಡುಪಿ : ಡೆತ್‌ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ. 13ರಂದು ಶಂಕರಪುರ ಸಾಲ್ಮರದ ಕ್ಯಾಟರಿಂಗ್ ಶೆಡ್ ಬಳಿ ನಡೆದಿದೆ. ಗೌತಮ್ ಪೂಜಾರಿ ಆತ್ಮಹತ್ಯೆಗೆ ಶರಣಾದವರು. ಸಾಲ್ಮರದ ಕ್ಯಾಟರಿಂಗ್ ಶೆಡ್ ಬಳಿಯ ರೂಮ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡಿದ್ದಾರೆ. ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಬೈಂದೂರು ಮೂಲದ ಗೌತಮ್ ಅವಿವಾಹಿತರಾಗಿದ್ದು, ಕಳೆದ ಐದಾರು ವರ್ಷಗಳಿಂದ ಶಂಕರಪುರದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
















































