ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾರ್ಕಳದ ಕ್ರೈಸ್ತ್ ಕಿಂಗ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ ಆಚಾರ್ಯ ಶೇ 97.8 ರಷ್ಟು ಅಂಕಗಳನ್ನು ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಯರ್ಲಪಾಡಿ ಗ್ರಾಮದ ಕಾಂತರಗೋಳಿಯ ನಿವಾಸಿಗಳಾದ ಸುಧಾಕರ ಆಚಾರ್ಯ ಮತ್ತು ರೇಣುಕಾ ಆಚಾರ್ಯ ದಂಪತಿಯ ಪುತ್ರಿ.
ಸಮಾಜದಿಂದ ಅಭಿನಂದನೆ:
ಪ್ರಣಮ್ಯ ಆಚಾರ್ಯ ಅವರ ಈ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿರುವ ‘ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ ಬೈಲೂರು’, ವಿದ್ಯಾರ್ಥಿನಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.
ಪಿಯುಸಿ ಫಲಿತಾಂಶ: ಕಾಂತರಗೋಳಿಯ ಪ್ರಣಮ್ಯ ಆಚಾರ್ಯಗೆ ಶೇ 97.8 ಅಂಕ; ವಿಶ್ವಕರ್ಮ ಸಮಾಜದಿಂದ ಅಭಿನಂದನೆ



















