ವಿಬಿಎಸ್ ಸಭಾ – ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ‌ ಸಭಾ ವತಿಯಿಂದ ಪದವಿ ಪೂರ್ವ ತರಗತಿಗಳಲ್ಲಿ ಕಲಿಯುತ್ತಿರುವ ಕಾರ್ಕಳ ತಾಲೂಕಿನ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಶೇ. 60ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ದತ್ತಿನಿಧಿ 2026
2025-26ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 92ಕ್ಕಿಂತ ಅಧಿಕ ಅಂಕ ಪಡೆದಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ನಗದು ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯು ಹಸ್ತಾಕ್ಷರದಲ್ಲಿದ್ದು ವಿದ್ಯಾರ್ಥಿ ಓದುತ್ತಿರುವ ಕಾಲೇಜು, ತರಗತಿ, ಮನೆಯ ವಿಳಾಸ, ಕೂಡುವಳಿಕೆಯ ಮೊಕ್ತೇಸರರ ಅಥವಾ ಸಮಾಜದ ಸಂಘ ಸಂಸ್ಥೆಗಳ ಅಧ್ಯಕ್ಷರ ದೃಢೀಕರಣದೊಂದಿಗೆ ಅಂಕಪಟ್ಟಿ ದೃಢೀಕೃತ ಸಂಪೂರ್ಣ ವಿವರಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರ ದೃಢೀಕರಣವನ್ನು ಹೊಂದಿರಬೇಕು.

ಅರ್ಜಿಯನ್ನು ವಿ.ಬಿ.ಎಸ್ ಸಭಾ ಪೆರ್ವಾಜೆಯ ಪದ್ಮನಾಭ ಆಚಾರ್ಯ ಅಥವಾ ರಮೇಶ್‌ ಆಚಾರ್ಯ (9844995533) ಮನು ಜ್ಯುವೆಲ್ಲರ್ಸ್‌ ಸಪ್ತಗಿರಿ ಕಾಂಪ್ಲೆಕ್ಸ್‌, ಮಾರ್ಕೆಟ್‌ ರೋಡ್‌, ಕಾರ್ಕಳ ಇವರಿಂದ ಪಡೆಯಬಹುದಾಗಿದೆ. ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಜೂ. 10ರೊಳಗೆ ವಿಬಿಎಸ್‌ ಸಭಾ ಪೆರ್ವಾಜೆ ಕಾರ್ಕಳ ಇಲ್ಲಿಗೆ ಸಲ್ಲಿಸಬೇಕು ಎಂದು ಸಭಾದ ಪ್ರಕಟನೆ ತಿಳಿಸಿದೆ.





































































































error: Content is protected !!
Scroll to Top