ವಂಚನೆ : ಮಂತ್ರಿ ಡೆವಲಪರ್ಸ್‌ ಮಾಲಕರ ಬಂಧನ

ಬೆಂಗಳೂರು: ಫ್ಲ್ಯಾಟ್‌ ನೀಡುವುದಾಗಿ ನಂಬಿಸಿ ಜನರಿಂದ ಸಾವಿರಾರು ಕೋ.ರೂ. ಸಂಗ್ರಹಿಸಿ ವಂಚಿಸಿದ ಆರೋಪದಲ್ಲಿ ಖ್ಯಾತ ಬಿಲ್ಡರ್‌ ಸುಶೀಲ್‌ ಪಾಂಡುರ ಮಂತ್ರಿ ಹಾಗೂ ಅವರ ಪುತ್ರ ಪ್ರತೀಕ್‌ ಮಂತ್ರಿಯನ್ನು ಸಿಐಡಿ ಪೊಲೀಸು ಬಂಧಿಸಿದ್ದಾರೆ.
ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ತಂದೆ ಮಗನ ವಿರುದ್ಧ 2019ರಲ್ಲಿ ನಾಲ್ಕು ವಂಚನೆ ಪ್ರಕರಣಗಳು ದಾಖಲಾಗಿವೆ.ಕೆಲ ಸಮಯದ ಹಿಂದೆ ವಮಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಶೀಲ್‌ ಮಂತ್ರಿಯನ್ನು ಬಂಧಿಸಿದ್ದು. ಜಾಮೀನಿನಲ್ಲಿ ಹೊರ ಬಂದಿದ್ದ ಅವರು ಮತ್ತೆ ಸಿಐಡಿ ಪೊಲೀಸರ ಬಂಧನಕ್ಕೊಳಗಾಗಿದ್ದಾರೆ.
ಸುಶೀಲ್‌ ಮಂತ್ರಿ ಸ್ಥಾಪಿಸಿದ ಮಂತ್ರಿ ಡೆವಲಪರ್ಸ್‌ ಬಹಳ ಖ್ಯಾತಿ ಗಳಿಸಿತ್ತು.ಬೆಂಗಳೂರು ಸಹಿತ ಹವು ನಗರಗಳಲ್ಲಿ ಈ ಸಂಸ್ಥೆ ಅನೇಕ ಬಹುಮಹಡಿ ವಸತಿ ಕಟ್ಟಡಗಳನ್ನು ನಿರ್ಮಿಸಿದೆ.ಆದರೆ ಅನಂತರ ಕಂಪನಿಯ ವಿರುದ್ಧ ವಂಚನೆಯ ಆರೋಪ ಕೇಳಿಬಂದಿದೆ.







































































































































error: Content is protected !!
Scroll to Top