ಬಾಲಾಜಿ ರೂಪದಲ್ಲಿ ನನಸಾದ ಬಾಲ್ಯದ ಕನಸು

ಕಾರ್ಕಳ : ಬಾಲ್ಯದಲ್ಲಿ ಎಲ್ಲರೂ ಏನೇನೋ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ, ಏನಾದರೂ ಸಾಧನೆ ಮಾಡಿ ತೋರಿಸಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ಎಲ್ಲರಿಗೂ ಆ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ, ಅದೃಷ್ಟ ಸಿಗುವುದಿಲ್ಲ. ಆದರೆ ಸಾಧು ಹಾಂಡ ಅವರು ತನ್ನ ಕನಸನ್ನು ನನಸು ಮಾಡಿ ಈಗ ಗೊಮ್ಮಟ ನಗರಿ ಖ್ಯಾತಿಯ, ಪ್ರವಾಸೋದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರ್ಕಳ ನಗರಕ್ಕೊಂದು ಅತ್ಯುತ್ತಮ ಹೋಟೆಲನ್ನು ಕೊಡುಗೆಯಾಗಿ ನೀಡಿದ್ದಾರೆ.

ಬಾಲಾಜಿ ಇನ್‌ಗೆ ಹಾರ್ದಿಕ ಸ್ವಾಗತ-ಇದು ಕೇವಲ ಹೋಟೆಲ್ ಅಲ್ಲ, ತವರಿನ ಪ್ರೀತಿ.!

JKAK ವೆಂಚರ್ಸ್ ಮಾಲಕತ್ವದಲ್ಲಿ ಪ್ರತಿಷ್ಠಿತ ಬಾಲಾಜಿ ಹೋಟೆಲ್ ಈಗ ನವರೂಪದಲ್ಲಿ, ಬಾಲಾಜಿ ಇನ್ ಆಗಿ ನಿಮ್ಮ ಸೇವೆಗೆ ಸಿದ್ಧವಾಗಿದೆ. ಸಾಧು ಹಾಂಡ ಅವರ ಒಂದೇ ಕನಸು, ನಮ್ಮೂರಿನ ಜನರಿಗೆ ಉತ್ತಮ, ಶುಚಿ-ರುಚಿಯಾದ ಊಟ ಹತ್ತಿರದಲ್ಲೇ ಸಿಗಬೇಕು. ಕಾರ್ಕಳಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ವಸತಿ ಸಿಗಬೇಕು.

ನಿಮಗಾಗಿ ಕಲ್ಪಿಸಿರುವ ಸೌಕರ್ಯಗಳು

ರುಚಿಯ ಭರವಸೆ: ಶುಚಿಯಾದ, ಉತ್ತಮ ಗುಣಮಟ್ಟದ, ಬಗೆಬಗೆಯ ತಿನಿಸುಗಳು. ಕುಟುಂಬದೊಂದಿಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಹ್ಲಾದಕರ ವಾತಾವರಣ.

ಆಧುನಿಕ ಸೌಕರ್ಯ: ಆಕರ್ಷಕ ವಿನ್ಯಾಸದ ಎಸಿ ಮತ್ತು ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್. ಪ್ರಶಾಂತವಾದ ಎಸಿ ರೂಂಗಳು.

ಸಂಭ್ರಮಕ್ಕೆ ವಿಶಾಲ ಸ್ಥಳ: ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ವಿಶಾಲವಾದ ಹಾಲ್. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ.

ಇದು ಕೇವಲ ವ್ಯಾಪಾರವಲ್ಲ. ಇದು ಹುಟ್ಟೂರಿಗೆ ಮಗನೊಬ್ಬ ನೀಡುತ್ತಿರುವ ಕಾಣಿಕೆ. ತಮ್ಮ ಫಾರ್ಮ್ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುತ್ತಿರುವ ಅವರು, ಬಾಲಾಜಿ ಇನ್ ಮೂಲಕ ನಿಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಬಾಲಾಜಿ ಇನ್ ಈಗ ಶುಭಾರಂಭಗೊಂಡು ನಿಮ್ಮ ಸೇವೆಯಲ್ಲಿ ನಿರತವಾಗಿದೆ. ಗ್ರಾಹಕರಿಂದ ಅದ್ಭುತ ಸ್ಪಂದನೆ ದೊರೆಯುತ್ತಿದೆ. ಹೋಟೆಲ್ ಬಾಲಾಜಿ ಇನ್, ತಾಲೂಕು ಕಚೇರಿ ಬಳಿ, ಕಾರ್ಕಳ JKAK ವೆಂಚರ್ಸ್ ಆಧುನಿಕತೆಯೊಂದಿಗೆ ಹುಟ್ಟೂರಿನ ಮಮತೆ





































error: Content is protected !!
Scroll to Top