ಕಾರ್ಕಳ: ನಿಟ್ಟೆಯ ಸರಸ್ವತಿ ನಿವಾಸದ ಶತಾಯುಷಿ ಚೆಲುವಯ್ಯ ಶೆಟ್ಟಿಯವರ ಪತ್ನಿ ಸರಸ್ವತಿ ಶೆಟ್ಟಿ (101) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಪುತ್ತೂರಿನ ತಮ್ಮ ಪುತ್ರಿಯ ಮನೆಯಲ್ಲಿ ಅವರು ಇಹಲೋಕ ತ್ಯಜಿಸಿದರು.
ಮೃತರು ಆರು ಮಂದಿ ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.



















